
ನಾಗಪುರ್(ಫೆ. 23): ಸೌರಭ್ ಸಿಂಗ್ ಅವರ ಭರ್ಜರಿ ಶತಕ ಹಾಗೂ ಡೆರಿಲ್ ಫೆರಾರಿಯೋ ಮತ್ತು ಸಿದ್ಧಾರ್ಥ್ ಅಕ್ರೆ ಅವರ ಅರ್ಧಶತಕದ ನೆರವಿನಿಂದ ಭಾರತದ ಅಂಡರ್-19 ಕ್ರಿಕೆಟ್ ತಂಡವು ಇಂಗ್ಲೆಂಡ್ ಕಿರಿಯರ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ಅಂಡರ್-19 ತಂಡದ 375 ರನ್'ಗಳ ಮೊದಲ ಇನ್ನಿಂಗ್ಸ್ ಸ್ಕೋರಿಗೆ ಪ್ರತಿಯಾಗಿ ಭಾರತೀಯ ಕಿರಿಯರು ತಮ್ಮ ಮೊದಲ ಇನ್ನಿಂಗ್ಸನ್ನು 9 ವಿಕೆಟ್ ನಷ್ಟಕ್ಕೆ 388 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಸೌರಭ್ ಸಿಂಗ್(109) ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಭಿಷೇಕ್ ಗೋಸ್ವಾಮಿ(58) ಡೆರಿಲ್ ಫೆರಾರಿಯೋ(55) ಹಾಗೂ ಸಿದ್ದಾರ್ಥ್ ಅಕ್ರೆ(54) ಉಪಯುಕ್ತ ಕೊಡುಗೆ ನೀಡಿ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡಲು ನೆರವು ನೀಡಿದರು. ಡೆರಿಲ್ ಫೆರಾರಿಯೋ ಹಾಗೂ ಸೌರಭ್ ಸಿಂಗ್ ನಡುವೆ 5ನೇ ವಿಕೆಟ್'ಗೆ 97 ರನ್ ಜೊತೆಯಾಟ ಬಂದದ್ದು ಟೀಮ್ ಇಂಡಿಯಾ ಇನ್ನಿಂಗ್ಸ್'ನ ಹೈಲೈಟ್ ಎನಿಸಿತು.
13 ರನ್'ಗ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಕಿರಿಯರು 3ನೇ ದಿನಾಂತ್ಯದಲ್ಲಿ 34 ರನ್'ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ನಾಳೆ ನಾಲ್ಕನೇ ಹಾಗೂ ಕೊನೆಯ ದಿನವಾಗಿದ್ದು, ಭಾರತೀಯರಿಗೆ ಗೆಲುವಿನ ಮಾಲೆ ಸಿಗುತ್ತದಾ ಎಂದು ಕಾದುನೋಡಬೇಕು.
ಭಾರತ ಹಾಗೂ ಇಂಗ್ಲೆಂಡ್ ಕಿರಿಯರ ನಡುವಿನ ಟೆಸ್ಟ್ ಸರಣಿಯಲ್ಲಿ ಇದು ಎರಡನೇ ಹಾಗೂ ಕೊನೆ ಟೆಸ್ಟ್ ಪಂದ್ಯವಾಗಿದೆ. ಮೊದಲ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡರೂ ಆಂಗ್ಲರೇ ಮೇಲುಗೈ ಸಾಧಿಸಿದ್ದರು. ಭಾರತೀಯರು ಸ್ವಲ್ಪದರಲ್ಲೇ ಸೋಲಿನಿಂದ ಬಚಾವಾಗಿದ್ದರು.
ಇಂಗ್ಲೆಂಡ್ ಕಿರಿಯರ ತಂಡ ಮೊದಲ ಇನ್ನಿಂಗ್ಸ್ 135.5 ಓವರ್ 375 ರನ್ ಆಲೌಟ್
ಭಾರತ ಕಿರಿಯರ ತಂಡ ಮೊದಲ ಇನ್ನಿಂಗ್ಸ್ 120.1 ಓವರ್ 388/9 (ಡಿಕ್ಲೇರ್)
(ಸೌರಭ್ ಸಿಂಗ್ 109, ಅಭಿಷೇಕ್ ಗೋಸ್ವಾಮಿ 58, ಡೆರಿಲ್ ಫೆರಾರಿಯೋ 55, ಸಿದ್ಧಾರ್ಥ್ ಅಕ್ರೆ 54 ರನ್ - ಆರೋನ್ ಬಿಯರ್ಡ್ 56/2, ಯೂವನ್ ವುಡ್ಸ್ 61/2, ಮ್ಯಾಕ್ಸ್ ಹೋಲ್ಡೆನ್ 63/2, ಲಿಯಾಮ್ ಪ್ಯಾಟರ್ಸನ್-ವೈಟ್ 83/2)
ಇಂಗ್ಲೆಂಡ್ ಕಿರಿಯರ ತಂಡ ಎರಡನೇ ಇನ್ನಿಂಗ್ಸ್ 9 ಓವರ್ 34/2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.