ಯಶ್ ಅಭಿನಯದ KGF ಡೈಲಾಗ್ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ!

Published : Aug 14, 2019, 08:14 PM IST
ಯಶ್ ಅಭಿನಯದ KGF ಡೈಲಾಗ್ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ!

ಸಾರಾಂಶ

KGF ಯಶಸ್ಸಿನ ಬಳಿಕ ಇದೀಗ KGF 2 ಚಿತ್ರ ಬಿಡುಗಡೆಗೆ  ಸಜ್ಜಾಗಿದೆ. ಆದರೆ ಇನ್ನೂ ಕೂಡ KGF ಚಿತ್ರ ಸದ್ದು ಮಾಡುತ್ತಲೇ ಇದೆ. ಇದೀಗ KGF ಚಿತ್ರದ ಡೈಲಾಗ್ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗ ಮಿಂಚಿದ್ದಾರೆ. 

ಮುಂಬೈ(ಆ.14): ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಭರ್ಜರಿ ಯಶಸ್ಸಿನ ಬಳಿಕ ಇದೀಗ KGF ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಆದರೆ KGF ಚಿತ್ರ ಇನ್ನೂ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಚಿತ್ರ ರಿಲೀಸ್ ಆಗೋ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ KGF ಚಿತ್ರದ ಫೇಮಸ್ ಡೈಲಾಗ್ ಹೇಳೋ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿನಯವನ್ನು ಇಮಿಟೇಟ್ ಮಾಡಿದ್ದಾರೆ.

ಟಿಕ್ ಟಾಕ್, ಡಬ್‌ಸ್ಮಾಶ್ ಮೂಲಕ ನಟ ನಟಿಯರ  ಡೈಲಾಗ್ ಹೇಳೋದು ಈಗ ಕಾಮನ್ ಆಗಿದೆ. ಇದೀಗ ಇರ್ಫಾನ್ ಪಠಾಣ್ ಕೂಡ  ಮೂವಿ ಡೈಲಾಗ್ ಹೇಳಿದ್ದಾರೆ. ಇರ್ಫಾನ್ ಆಯ್ಕೆ ಮಾಡಿದ್ದು ಯಶ್ ಅಭಿನಯದ KGF ಚಿತ್ರದ ಡೈಲಾಗ್. ಸದ್ಯ ಇರ್ಫಾನ್ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

 

ಇರ್ಫಾನ್ ಡೈಲಾಗ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಡೈಲಾಗ್ ಅದ್ಭುತ ಬಿಗ್ ಸ್ಕ್ರೀನ್‌ನಲ್ಲಿ ನೋಡಲು ಕಾತರರಾಗಿದ್ದೇವೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ