ಭಾರತ-ಐರ್ಲೆಂಡ್ ಟಿ20: ಕನ್ನಡಿಗನ ಪರ ಸೆಹ್ವಾಗ್ ಬ್ಯಾಟಿಂಗ್ ಮಾಡಿದ್ದೇಕೆ?

First Published Jun 27, 2018, 4:54 PM IST
Highlights


ಇಂಗ್ಲೆಂಡ್ ಹಾಗೂ ವಿಶ್ವಕಪ್ ಟೂರ್ನಿ ದೃಷ್ಟಿಯಿಂದ ಭಾರತದ ತಂಡದ ಪ್ಲೇಯಿಂಗ್ ಇಲೆವೆನ್ ಕುರಿತು ಮಾಜಿ  ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ಭಾರತದ ಮಧ್ಯಮ ಕ್ರಮಾಂಕದಲ್ಲಿ ಯಾರಿಗೆ ಸ್ಥಾನ ನೀಡಬೇಕು? ಯಾರಿಗೆ ಕೊಕ್ ನೀಡಬೇಕು? ಈ ಕುರಿತು ಸೆಹ್ವಾಗ್ ಹೇಳಿದ್ದೇನು? ಇಲ್ಲಿದೆ ಡಿಟೇಲ್ಸ್.

ಮುಂಬೈ(ಜೂ.27): ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ-ಟ್ವೆಂಟಿ ಪಂದ್ಯದಲ್ಲಿ ಕೆಎಲ್ ರಾಹುಲ್‌ಗೆ ಸ್ಥಾನ ಕಲ್ಪಿಸಬೇಕು ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಆಗ್ರಹಿಸಿದ್ದಾರೆ. ಇಂಗ್ಲೆಂಡ್ ಹಾಗೂ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಕೆಎಲ್ ರಾಹುಲ್‌ಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ರಾಹುಲ್‌ಗೆ ತಂಡದಲ್ಲಿ ಸ್ಥಾನ ಕಲ್ಪಿಸೋದರಿಂದ ಭಾರತದ ಬ್ಯಾಟಿಂಗ್ ಮತ್ತಷ್ಟು ಬಲಷ್ಠಗೊಳ್ಳಲಿದೆ. ಸದ್ಯ ರಾಹುಲ್‌ಗಾಗಿ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅನಿವಾರ್ಯವಾಗಿ ಹೊರಗುಳಿಬೇಕಾಗುತ್ತೆ ಎಂದು ವೀರೂ ಹೇಳಿದ್ದಾರೆ. ನಿಧಾಸ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಆದರೆ ಸದ್ಯ ರಾಹುಲ್‌ಗೆ ಸ್ಥಾನ ನೀಡುವುದು ಸೂಕ್ತ ಎಂದಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದು ಅದ್ಬುತ ಪ್ರದರ್ಶನ ನೀಡಿದ್ದರು. ವಿರೇಂದ್ರ ಸೆಹ್ವಾಗ್ ಮಾರ್ಗದರ್ಶನದಲ್ಲಿ ರಾಹುಲ್ ಉತ್ತಮ ಲಯ ಕಂಡುಕೊಂಡಿದ್ದರು. ಹೀಗಾಗಿ ರಾಹುಲ್ ಬ್ಯಾಟಿಂಗ್ ಹಾಗೂ ಪ್ರತಿಭೆ ಕುರಿತು ಸ್ಪಷ್ಟ ಅರಿತಿರುವ ಸೆಹ್ವಾಗ್, ಕನ್ನಡಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ.
 

click me!