ಫಿಫಾ ವಿಶ್ವಕಪ್: 5 ಬಾರಿ ಚಾಂಪಿಯನ್ ಬ್ರೆಜಿಲ್‌ಗೆ ನಾಕೌಟ್‌ ಗುರಿ

First Published Jun 27, 2018, 4:08 PM IST
Highlights

ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ರೆಜಿಲ್‌ ತಂಡ ಸರ್ಬಿಯಾ ವಿರುದ್ಧ ಸೆಣಸಲಿದ್ದು, ಸ್ವಿಜರ್‌ಲೆಂಡ್‌ಗೆ ಈಗಾಗಲೇ ಹೊರಬಿದ್ದಿರುವ ಕೋಸ್ಟಾರಿಕಾ ಎದುರಾಗಲಿದೆ.

ಮಾಸ್ಕೋ[ಜೂ.27]: ‘ಇ’ ಗುಂಪಿನ ನಾಕೌಟ್‌ ಲೆಕ್ಕಾಚಾರವೂ ಇಂದು ಮುಕ್ತಾಯಗೊಳ್ಳಲಿದ್ದು, 5 ಬಾರಿ ಚಾಂಪಿಯನ್‌ ಬ್ರೆಜಿಲ್‌ ಹಾಗೂ ಸ್ವಿಜರ್‌ಲೆಂಡ್‌ ನಾಕೌಟ್‌ಗೇರುವ ನೆಚ್ಚಿನ ತಂಡಗಳು ಎನಿಸಿವೆ. 

ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬ್ರೆಜಿಲ್‌ ತಂಡ ಸರ್ಬಿಯಾ ವಿರುದ್ಧ ಸೆಣಸಲಿದ್ದು, ಸ್ವಿಜರ್‌ಲೆಂಡ್‌ಗೆ ಈಗಾಗಲೇ ಹೊರಬಿದ್ದಿರುವ ಕೋಸ್ಟಾರಿಕಾ ಎದುರಾಗಲಿದೆ. ಬ್ರೆಜಿಲ್‌ 2 ಪಂದ್ಯಗಳಿಂದ 4 ಅಂಕ ಗಳಿಸಿದೆ. ಸ್ವಿಜರ್‌ಲೆಂಡ್‌ ಸಹ 4 ಅಂಕ ಸಂಪಾದಿಸಿದೆ. ಸರ್ಬಿಯಾ ವಿರುದ್ಧ ಬ್ರೆಜಿಲ್‌ ಡ್ರಾ ಸಾಧಿಸಿದರೂ ಸಾಕು, ನಾಕೌಟ್‌ನಲ್ಲಿ ಸ್ಥಾನ ಖಚಿತವಾಗಲಿದೆ. 

ಅತ್ತ ಸ್ವಿಜರ್‌ಲೆಂಡ್‌ ಸಹ ಡ್ರಾ ಮಾಡಿಕೊಂಡರೂ ಅಂತಿಮ 16ರ ಹಂತಕ್ಕೇರಲಿದೆ. ಒಂದೊಮ್ಮೆ ಬ್ರೆಜಿಲ್‌ಗೆ ಸರ್ಬಿಯಾ ಸೋಲುಣಿಸಿದರೆ ಆಗ ನಾಕೌಟ್‌ ಲೆಕ್ಕಾಚಾರಕ್ಕೆ ತಿರುವು ಸಿಗಲಿದೆ. ಸರ್ಬಿಯಾ ಅಂತಿಮ 16ರ ಸುತ್ತಿಗೆ ಪ್ರವೇಶಿಸಲಿದೆ. ಸ್ವಿಸ್‌ ಹಾಗೂ ಕೋಸ್ಟರಿಕಾ ಪಂದ್ಯದ ಫಲಿತಾಂಶದ ಮೇಲೆ ಬ್ರೆಜಿಲ್‌ ಭವಿಷ್ಯ ನಿಲ್ಲಲಿದೆ.

click me!