ಐಪಿಎಲ್ ಟೂರ್ನಿಯಿಂದ 100 ಕೋಟಿ ಸಂಪಾದಿಸಿದ ಕ್ರಿಕೆಟಿಗರು ಯಾರು?

 |  First Published Jun 6, 2018, 9:34 PM IST

ಐಪಿಎಲ್ ಟೂರ್ನಿ ಭಾರತದ ಹಲವು ಯುವ ಪ್ರತಿಭೆಗಳಿಗೆ ವೇದಿಕೆ ಜೊತೆಗೆ ಭಾರತೀಯ ಕ್ರಿಕೆಟಿಗರ ಆರ್ಥಿಕ ಸ್ಥಿತಿಯನ್ನ ಮತ್ತಷ್ಟು ಉತ್ತಮಗೊಳಿಸಿರೋದರಲ್ಲಿ ಯಾವುದೇ ಅನುಮಾನವಿಲ್ಲ. ಈ ಐಪಿಎಲ್ ಟೂರ್ನಿಯಿಂದ ಕೆಲವು ಕ್ರಿಕೆಟಿಗರು 100 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಪಾದಿಸಿದ್ದಾರೆ. ಐಪಿಎಲ್‌ನಿಂದ 100 ಕೋಟಿ ಕ್ಲಬ್ ಸೇರಿದ ಕ್ರಿಕೆಟಿಗರ ವಿವರ ಇಲ್ಲಿದೆ.


ಬೆಂಗಳೂರು(ಜೂನ್.6): ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 11 ಆವೃತ್ತಿಗಳನ್ನ ಯಶಸ್ವಿಯಾಗಿ ಮುಗಿಸಿದೆ. 11 ಆವೃತ್ತಿಗಳಲ್ಲಿ ಇಲ್ಲೀವರೆಗೆ ಓಟ್ಟು 694 ಆಟಗಾರರ ಜೊತೆಗೆ ಫ್ರಾಂಚೈಸಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಕೆಲವು ಕ್ರಿಕೆಟಿಗರು ಐಪಿಎಲ್‌ನಿಂದಲೇ 100 ಕೋಟಿ ಸಂಭಾವನೆ ಪಡೆದಿದ್ದಾರೆ.

ಐಪಿಎಲ್ ಟೂರ್ನಿಯಿಂದಲೇ 100 ಕೋಟಿಗೂ ಅಧಿಕ ವೇತನ ಪಡೆದ ಕ್ರಿಕೆಟಿಗರ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಮ್ ಎಸ್ ಧೋನಿ ಹೆಸರು ಮುಂಚೂಣಿಯಲ್ಲಿದೆ. 2008 ರಿಂದ 2018ರ ವರೆಗಿನ ಐಪಿಎಲ್ ಟೂರ್ನಿಯಲ್ಲಿ ಧೋನಿ 107.8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Latest Videos

undefined

ಎಮ್ ಎಸ್ ಧೋನಿ 2008ರಲ್ಲಿ 6 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಸದ್ಯ ಧೋನಿ ಸಂಭಾವನೆ 15 ಕೋಟಿ. ಧೋನಿ ಸತತ 2008ರಿಂದ ಸತತ 8  ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಸಿಎಸ್‌ಕೆ ತಂಡದ 2 ವರ್ಷಗಳ ನಿಷೇಧದಿಂದ ಧೋನಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ಸೇರಿಕೊಂಡಿದ್ದರು. ಬಳಿಕ 2018ರಲ್ಲಿ ಮತ್ತೆ ಸಿಎಸ್‌ಕೆ ತಂಡದ ನಾಯಕನಾಗಿ, ಪ್ರಶಸ್ತಿ ಗೆದ್ದು ದಾಖಲೆ ಬರೆದರು.

ಐಪಿಎಲ್ ಟೂರ್ನಿಯಲ್ಲಿ 100 ಕೋಟಿ ಸಂಭಾವನೆ ಪಡೆದ ಮತ್ತೊಬ್ಬ ಕ್ರಿಕೆಟಿಗ ಅಂದರೆ ಮಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ. 11 ಆವೃತ್ತಿ ಐಪಿಎಲ್ ಟೂರ್ನಿಯಿಂದ ರೋಹಿತ್ ಶರ್ಮಾ ಓಟ್ಟು 101.6 ಕೋಟಿ ರೂಪಾಯಿ ಗಳಿಸಿದ್ದಾರೆ.

2008ರ ಚೊಚ್ಚಲ ಆವೃತ್ತಿಯಲ್ಲಿ ರೋಹಿತ್ ಶರ್ಮಾ 3 ಕೋಟಿ ರೂಪಾಯಿಗೆ ಡೆಕ್ಕನ್ ಚಾರ್ಜಸ್ ತಂಡದ ಪಾಲಾಗಿದ್ದರು. ಸದ್ಯ ರೋಹಿತ್ ಶರ್ಮಾ ಐಪಿಎಲ್ ಸಂಭಾವನೆ 15 ಕೋಟಿ ರೂಪಾಯಿ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 3 ಬಾರಿ ಐಪಿಎಲ್ ಟ್ರೋಫಿ ವಶಪಡಿಸಿಕೊಂಡಿದೆ.

click me!