ಐಪಿಎಲ್ ವಿಶ್ವದ ಶ್ರೀಮಂತ ಟಿ20 ಲೀಗ್!: ಭಾರತ ಪಂದ್ಯಕ್ಕಿಂತ ಐಪಿಎಲ್ ಪಂದ್ಯವೇ ದುಬಾರಿ!

Published : Sep 05, 2017, 03:43 PM ISTUpdated : Apr 11, 2018, 12:45 PM IST
ಐಪಿಎಲ್ ವಿಶ್ವದ ಶ್ರೀಮಂತ ಟಿ20 ಲೀಗ್!: ಭಾರತ ಪಂದ್ಯಕ್ಕಿಂತ ಐಪಿಎಲ್ ಪಂದ್ಯವೇ ದುಬಾರಿ!

ಸಾರಾಂಶ

ಐಪಿಎಲ್ ಮಾಧ್ಯಮ ಹಕ್ಕು ಹರಾಜಿನಿಂದ ಬಿಸಿಸಿಐಗೆ ಬಂಪರ್ ದುಡ್ಡು ಸಿಕ್ಕಿದೆ. ಭಾರತ ತಂಡ ಆಡುವ ಅಂ.ರಾ. ಪಂದ್ಯಕ್ಕಿಂತ ಐಪಿಎಲ್ ಪಂದ್ಯವೇ ದುಬಾರಿ ಯಾಗಲಿದೆ ಎನ್ನುವ ವಿಚಾರ ಅಚ್ಚರಿಗೆ ಕಾರಣವಾಗಿದೆ.

ಮುಂಬೈ(ಸೆ.05): ಐಪಿಎಲ್ ಮಾಧ್ಯಮ ಹಕ್ಕು ಹರಾಜಿನಿಂದ ಬಿಸಿಸಿಐಗೆ ಬಂಪರ್ ದುಡ್ಡು ಸಿಕ್ಕಿದೆ. ಭಾರತ ತಂಡ ಆಡುವ ಅಂ.ರಾ. ಪಂದ್ಯಕ್ಕಿಂತ ಐಪಿಎಲ್ ಪಂದ್ಯವೇ ದುಬಾರಿ ಯಾಗಲಿದೆ ಎನ್ನುವ ವಿಚಾರ ಅಚ್ಚರಿಗೆ ಕಾರಣವಾಗಿದೆ.

ಪ್ರತಿ ಐಪಿಎಲ್ ಪಂದ್ಯಕ್ಕೆ ಬಿಸಿಸಿಐಗೆ ಬರೋಬ್ಬರಿ 55 ಕೋಟಿ ಸಿಗಲಿದೆ. ಅಂದರೆ ಒಂದು ಅಂತರಾಷ್ಟ್ರೀಯ ಪಂದ್ಯಕ್ಕಿಂತ 12 ಕೋಟಿ ಹೆಚ್ಚು ಹಣ ಐಪಿಎಲ್ ಪಂದ್ಯದಿಂದ ದೊರೆಯಲಿದೆ. 2012ರಲ್ಲಿ ಸ್ಟಾರ್ ಸಂಸ್ಥೆ 6 ವರ್ಷಗಳ ಅವಧಿಗೆ ಭಾರತ ತಂಡದ ಪಂದ್ಯಗಳ ಪ್ರಸಾರ ಹಕ್ಕನ್ನು 3851 ಕೋಟಿಗೆ ಪಡೆದುಕೊಂಡಿತ್ತು. ಇದರ ಪ್ರಕಾರ ಪ್ರತಿ ಪಂದ್ಯಕ್ಕೆ ಸ್ಟಾರ್ ಸಂಸ್ಥೆ ಬಿಸಿಸಿಐಗೆ 43 ಕೋಟಿ ನೀಡಲಿದೆ.

ಇನ್ನೂ ವಿಶೇಷ ಎಂದರೆ ಬಿಸಿಸಿಐ, ಇಸಿಬಿ, ಕ್ರಿಕೆಟ್ ಆಸ್ಟ್ರೇಲಿಯಾ ಮೂರೂ ಕ್ರಿಕೆಟ್ ಮಂಡಳಿಗಳು ಮಾಧ್ಯಮ ಪ್ರಸಾರ ಹಕ್ಕಿನಿಂದ ವರ್ಷಕ್ಕೆ 3277 ಕೋಟಿ ಪಡೆಯಲಿವೆ. ಆದರೆ ಐಪಿಎಲ್‌'ನಿಂದಲೇ ಬಿಸಿಸಿಐಗೆ ವಾರ್ಷಿಕ 3270 ಹಣ ಸಿಗಲಿದೆ.

ಐಪಿಎಲ್ ವಿಶ್ವದ ಶ್ರೀಮಂತ ಟಿ20 ಲೀಗ್!

10 ವರ್ಷಗಳ ಬಳಿಕ ಐಪಿಎಲ್ ವಿಶ್ವದ ಶ್ರೀಮಂತ ಟಿ20 ಲೀಗ್ ಆಗಿ ರೂಪುಗೊಂಡಿದೆ. ಕೇವಲ ಮಾಧ್ಯಮ ಪ್ರಸಾರದಿಂದಲೇ ಬಿಸಿಸಿಐ 3270 ಕೋಟಿ ಸಿಗಲಿದೆ. ಬಿಗ್‌ ಬ್ಯಾಶ್ ಲೀಗ್ ಪ್ರಸಾರ ಹಕ್ಕಿನಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಸಿಗುವುದು 128 ಕೋಟಿ ಮಾತ್ರ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್