
ಬೆಂಗಳೂರು(ಡಿ.13): ಐಪಿಎಲ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಹಲವು ಕ್ರಿಕೆಟಿಗರಿಗೆ ಆರ್‌ಸಿಬಿ ಅತ್ಯುತ್ತಮ ಅವಕಾಶ ಒದಗಿಸಿದೆ. ಆದರೆ ಕೆಲ ಕ್ರಿಕೆಟಿಗರು ಆರ್‌ಸಿಬಿಯಿಂದ ಹೊರಬಂದ ಕೂಡಲೇ ಐಪಿಎಲ್ ಅವಕಾಶವನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್ ಹರಾಜು: ದಾಖಲೆ ಬರೀತಾರ ಈ ಐವರು ಕ್ರಿಕೆಟಿಗರು?
1 ರಾಸ್ ಟೇಲರ್
ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ 2008ರ ಮೊದಲ ಆವೃತ್ತಿಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು, 2010ರ ವರೆಗೆ ಆರ್‌ಸಿಬಿ ಭಾಗವಾಗಿದ್ದರು. 2009ರಲ್ಲಿ ಕೆಲ ಪಂದ್ಯದಳಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿದ್ದರು. ಆರ್‌ಸಿಬಿ ಪರ 22 ಪಂದ್ಯ ಆಡಿದ ಟೇಲರ್ 517 ರನ್ ಸಿಡಿಸಿದ್ದರು. ಆದರೆ ಆರ್‌ಸಿಬಿಯಿಂದ ಹೊರಬಿದ್ದ ಮೇಲೆ ಟೇಲರ್ ಐಪಿಎಲ್ ಭವಿಷ್ಯ ಕಮರಿಹೋಯಿತು. ಬಳಿಕ ಟೇಲರ್ ಡೆಲ್ಲಿ, ಪುಣೆ ವಾರಿಯರ್ಸ್, ರಾಜಜಸ್ಥಾನ ತಂಡ ಸೇರಿಕೊಂಡರೂ ಅಬ್ಬರಿಸಲಿಲ್ಲ. 2014ರಲ್ಲಿ ಅನ್‌ಸೋಲ್ಡ್ ಆದ ಟೇಲರ್ ಬಳಿಕ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ: ಛೀ..ರವಿಶಾಸ್ತ್ರಿಗಳ ಬಾಯಲ್ಲಿ ಎಂಥಾ ಅಶ್ಲೀಲ ಮಾತು...ವಿಡಿಯೋ ವೈರಲ್
2 ತಿಲಕರತ್ನೆ ದಿಲ್ಶಾನ್
ಡೆಲ್ಲಿ ಡೇರ್ ಡೆವಿಲ್ಸ್ ಪರ 3 ಆವೃತ್ತಿ ಆಡಿದ ಶ್ರೀಲಂಕಾ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಆರ್‌ಸಿಬಿ ಸೇರಿಕೊಂಡರು. ಆರ್‌ಸಿಬಿ ಪರ 25 ಪಂದ್ಯಗಳಿಂದ 587 ರನ್ ಸಿಡಿಸಿದ ದಿಲ್ಶಾನ್ 2013ರ ಆವೃತ್ತಿ ಬಳಿಕ ತಂಡದಿಂದ ಹೊರಬಿದ್ದರು. 2014ರಲ್ಲಿ ಮಾರಾಟವಾಗದೇ ಉಳಿದ ದಿಲ್ಶಾನ್ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ.
3 ಪ್ರವೀಣ್ ಕುಮಾರ್
2008 ರಿಂದ 2010ರ ವರೆಗೆ ಆರ್‌ಸಿಬಿ ತಂಡದಲ್ಲಿದ್ದ ವೇಗಿ ಪ್ರವೀಣ್ ಕುಮಾರ್, 2011ರ ಆವೃತ್ತಿ ವೇಳೆಗೆ ತಂಡದಿಂದ ಹೊರಬಿದ್ದರು.ಬಳಿಕ ಪಂಜಾಬ್, ಮುಂಬೈ, ಹೈದರಾಬಾದ್ ಹಾಗೂ ಗುಜರಾತ್ ತಂಡ ಸೇರಿಕೊಂಡರು ಅಬ್ಬರಿಸಲಿಲ್ಲ. 2018ರ ಹರಾಜಿನಲ್ಲಿ ಮಾರಾಟವಾಗದೇ ಉಳಿದರು.
ಇದನ್ನೂ ಓದಿ: ದಾದಾ ಅಲ್ಲ, ಧೋನಿಯೂ ಅಲ್ಲ, ಗಂಭೀರ್ ಬೆಸ್ಟ್ ಕ್ಯಾಪ್ಟನ್ ಯಾರು?
4 ವರುಣ್ ಆರೋನ್
ವೇಗಿ ವರುಣ್ ಆರೋನ್ 2014ರಲ್ಲಿ ಆರ್‌ಸಿಬಿ ತಂಡ ಸೇರಿಕೊಂಡರು. ಆರ್‌ಸಿಬಿ ಪರ 24 ಪಂದ್ಯಗಳಿಂದ 21 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಆರ್‌ಸಿಬಿ ತಂಡದಿಂದ ಹೊರಬಿದ್ದ ಮೇಲೆ 2017 ಹಾಗೂ 2018ರಲ್ಲಿ ಮಾರಾಟವಾಗದೇ ಉಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.