ಸ್ಟಾರ್ ವೇಗಿಗಿಲ್ಲ 2019ರ ಐಪಿಎಲ್ ಆಡೋ ಅವಕಾಶ

By Web DeskFirst Published Dec 9, 2018, 4:09 PM IST
Highlights

ಸನ್‌ರೈಸರ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿ ತಂದುಕೊಟ್ಟ ಸ್ಟಾರ್ ವೇಗಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈಗಾಗಲೇ ಟೂರ್ನಿ ಆಯೋಜನೆಗೆ ಹಲವು ಸಮಸ್ಯೆ ಎದುರಿಸುತ್ತಿರುವ ಬಿಸಿಸಿಐಗೆ ಇದೀಗ ಹೊಸ ತಲೆನೋವು ಶುರುವಾಗಿದೆ.

ಮುಂಬೈ(ಡಿ.9): 2019ರ ಐಪಿಎಲ್ ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿ ಪರಿಣಮಿಸಿದೆ. ಇಷ್ಟೇ ಅಲ್ಲ ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಇದರ ಬೆನ್ನಲ್ಲೇ, ಸ್ಟಾರ್ ವೇಗಿ ಇದೀಗ ಅಲಭ್ಯರಾಗಿದ್ದಾರೆ.

2016ರಲ್ಲಿ ಸನ್‌ರೈಸರ್ಸ್ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್, 2019ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. 17 ವಿಕೆಟ್ ಕಬಳಿಸೋ ಮೂಲಕ  ಸನ್‌ರೈಸರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2019ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಸ್ತಾಫಿಜುರ್ ರಹಮಾನ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅವಕಾಶ ನೀಡಿಲ್ಲ. 2019ರ ವಿಶ್ವಕಪ್ ಟೂರ್ನಿಯಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಸತತ ಐಪಿಎಲ್ ಪಂದ್ಯ ಆಡೋದರಿಂದ ಇಂಜುರಿ ಸಮಸ್ಯೆ ಎದುರಾಗಬಹುದು. ಹೀಗಾಗಿ ಮುಸ್ತಾಫಿಜುರ್ ರಹಮಾನ್‌ಗೆ ಕ್ಲಿಯೆರೆನ್ಸ್(NOC) ನೀಡಲು ಸಾಧ್ಯವಿಲ್ಲ ಎಂದಿದೆ.

2019ರ ಐಪಿಎಲ್ ಹರಾಜಿನಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು ಬಾಂಗ್ಲಾದೇಶ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಪ್ರಮುಖ ಆಟಗಾರರಿಗೆ ಅವಕಾಶ ನೀಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಹಿಂದೇಟು ಹಾಕಿದೆ. ಈ ಮೂಲಕ ವಿಶ್ವಕಪ್ ಟೂರ್ನಿಗಾಗಿ ಕಠಿಣ ನಿರ್ಧಾರ ತೆಗೆದುಕೊಂಡಿದೆ.

click me!
Last Updated Dec 9, 2018, 4:11 PM IST
click me!