
ಬೆಂಗಳೂರು[ಡಿ.18]: 2 ಆವೃತ್ತಿಗಳಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕೋಲ್ಕತಾ ನೈಟ್ ನೈಡರ್ಸ್ ಈ ಬಾರಿಯ ಹರಾಜಿನಲ್ಲಿ ಬೌಲರ್’ಗಳನ್ನು ಖರೀದಿಸುವಲ್ಲಿ ಹೆಚ್ಚು ಗಮನ ಹರಿಸಿತು.
12ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಶಾರುಕ್ ಖಾನ್ ಒಡೆತನದ ಕೆಕೆಆರ್ 8 ಆಟಗಾರರನ್ನು ಖರೀದಿಸಿದ್ದು, ಅದರಲ್ಲಿ ನಾಲ್ವರು ತಜ್ಞ ಬೌಲರ್ ಹಾಗೂ ಇಬ್ಬರು ಆಲ್ರೌಂಡರ್’ಗಳನ್ನು ಖರೀದಿಸಿದೆ. ಓರ್ವ ಬ್ಯಾಟ್ಸ್’ಮನ್ ಮತ್ತು ಓರ್ವ ವಿಕೆಟ್’ಕೀಪರ್’ನನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡಿದೆ.
ಹರಾಜಿನ ಬಳಿಕ ಕೋಲ್ಕತ ನೈಟ್ ರೈಡರ್ಸ್ ತಂಡ ಹೀಗಿದೆ ನೋಡಿ..
ಇಂದು ಹರಾಜಿನಲ್ಲಿ ಕೆಕೆಆರ್ ಖರೀದಿಸಿದ ಆಟಗಾರರಿವರು..
ಕಾರ್ಲೋಸ್ ಬ್ರಾಥ್’ವೈಟ್ - 5 ಕೋಟಿ - (AR)
ಲೂಕಿ ಫರ್ಗ್ಯೂಸನ್ - 1.60 ಕೋಟಿ (BL)
ಜೋ ಡೆನ್ಲಿ - 01 ಕೋಟಿ (BT)
ಹೆನ್ರಿ ಗುರ್ನೆ - 75 ಲಕ್ಷ (BL)
ನಿಖಿಲ್ ಶಂಕರ್ ನಾಯ್ಕ್ - 20 ಲಕ್ಷ (WK)
ಶ್ರೀಕಾಂತ್ ಮುಂಡೆ- 20 ಲಕ್ಷ (AR)
ಪೃಥ್ವಿ ರಾಜ್ ಯರ್ರಾ- 20 ಲಕ್ಷ (BL)
ಅನ್ರೀತ್ ನೋರ್ಜೆ - 20 ಲಕ್ಷ (BL)
ರೀಟೈನ್ ಮಾಡಿಕೊಂಡಿದ್ದ ಆಟಗಾರರಿವರು: ದಿನೇಶ್ ಕಾರ್ತಿಕ್ [ನಾಯಕ], ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಆ್ಯಂಡ್ರೆ, ಸುನಿಲ್ ನರೈನ್, ಶುಭ್’ಮನ್ ಗಿಲ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಶಿವಂ ಮಾವಿ, ನಿತಿಶ್ ರಾಣ, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.