ನಾಯಕ ವಿರಾಟ್ ಕೊಹ್ಲಿ ಸೆಂಚುರಿ, ಮೊಯಿನ್ ಆಲಿ ಹಾಫ್ ಸೆಂಚುರಿ ಹಾಗೂ ಡೇಲ್ ಸ್ಟೇನ್ ಅದ್ಬುತ ದಾಳಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಗೆಲುವು ದಾಖಲಿಸಿದೆ. ಸೋಲಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ RCB ಹಳೇ ಖದರ್ ತೋರಿಸಿದೆ. ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಹೈಲೈಟ್ಸ್.
ಕೋಲ್ಕತಾ(ಏ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಕೋಲ್ಕತಾದ ಈಡನ್ ಗಾರ್ಡ್ಸ್‌ನಲ್ಲಿ RCB ಅಬ್ಬರಿಸಿದೆ. ಆಂಡ್ರೆ ರಸೆಲ್ ಹಾಗೂ ನಿತೀಶ್ ರಾಣ ಆತಂಕ ಸೃಷ್ಟಿಸಿದರೂ, ನಾಯಕ ವಿರಾಟ್ ಕೊಹ್ಲಿ ಅಬ್ಬರದ ಶತಕ, ಮೊಯಿನ್ ಆಲಿ ಸ್ಫೋಟಕ ಹಾಫ್ ಸೆಂಚುರಿ ಹಾಗೂ ಅದ್ಬುತ ಬೌಲಿಂಗ್ ದಾಳಿಯಿಂದ RCB 10 ರನ್ ಗೆಲುವು ಸಾಧಿಸಿದೆ.
214 ರನ್ ಬೃಹತ್ ಟಾರ್ಗೆಟ್ ಮೋಡಿದ ಕೆಕೆಆರ್ ಆರಂಭದಲ್ಲೇ ಬೆಚ್ಚಿ ಬಿತ್ತು. ಕ್ರಿಸ್ ಲಿನ್ ಕೇವಲ 1 ರನ್ ಸಿಡಿಸಿ ಔಟಾದರೆ, ಸುನಿಲ್ ನರೈನ್ 18 ರನ್‌ಗೆ ಸುಸ್ತಾದರು. ಶುಭ್‌ಮಾನ್ ಗಿಲ್ ಹಾಗೂ ರಾಬಿನ್ ಉತ್ತಪ್ಪ ತಂಡಕ್ಕೆ ಆಸರೆಯಾಗಲಿಲ್ಲ. 79 ರನ್‌ಗಳಿಗೆ ಕೆಕೆಆರ್ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
undefined
ನಿತೀಶ್ ರಾಣ ಹಾಗೂ ಆ್ಯಂಡ್ರೆ ರಸೆಲ್ ಜೊತೆಯಾಟ ಕೆಕೆಆರ್ ತಂಡದಲ್ಲಿ ಗೆಲುವಿನ ಆಸೆ ಚಿಗುರೊಡೆಸಿತು. ಅಬ್ಬರಿಸಿದ ನಿತೀಶ್ ರಾಣ ಅರ್ಧಶತಕ ಸಿಡಿಸಿದರು. ಇತ್ತ ರಸೆಲ್ ಸಿಕ್ಸರ್ ಮೂಲಕ RCBಗೆ ನಡುಕ ಹುಟ್ಟಿಸಿದರು. ಇವರಿಬ್ಬರ ಜೊತೆಯಾಟ ಕೊಹ್ಲಿ ತನೋವು ಹೆಚ್ಚಿಸಿತು. ಸಿಕ್ಸರ್ ಮೂಲಕವೇ ರಸೆಲ್ ಆರ್ಭಟಿಸಿದರು. ರಸೆಲ್ ಸಿಡಿಸಿದ ಒಂದೊಂದು ಸಿಕ್ಸರ್ RCB ಮಾತ್ರವಲ್ಲ ಅಭಿಮಾನಿಗಳಲ್ಲೂ ಆತಂಕ ಸೃಷ್ಟಿಸಿತು.
ಅಂತಿಮ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 24 ರನ್ ಅವಶ್ಯಕತೆ ಇತ್ತು. ಮೊಯಿನ್ ಆಲಿಗೆ ಓವರ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ರಸೆಲ್ 25 ಎಸೆತದಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ 65 ರನ್ ಸಿಡಿಸಿ ರನೌಟ್ ಆದರು. ನಿತೀಶ್ ರಾಣ ಅಜೇಯ 85 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 5 ವಿಕೆಟ್ ನಷ್ಟಕ್ಕೆ 203 ರನ್ ಸಿಡಿಸಿತು. ಇದರೊಂದಿಗೆ ಬೆಂಗಳೂರು 10 ರನ್ ಗೆಲವು ಸಾಧಿಸಿತು.