IPL 2019: ವಾರ್ನರ್, ಬೈರ್‌ಸ್ಟೋ ಅಬ್ಬರ - KKRಗೆ ಸತತ 5ನೇ ಸೋಲು!

Published : Apr 21, 2019, 07:29 PM IST
IPL 2019: ವಾರ್ನರ್, ಬೈರ್‌ಸ್ಟೋ ಅಬ್ಬರ - KKRಗೆ ಸತತ 5ನೇ ಸೋಲು!

ಸಾರಾಂಶ

ಹೈದರಾಬಾದ್ ಅಂಗಳಗಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಮುಖಭಂಗವಾಗಿದೆ. ತವರಿನ SRH ತಂಡದ ಅಬ್ಪರಕ್ಕೆ ಕೆಕೆಆರ್ ಮತ್ತೊಂದು ಸೋಲಿಗೆ ಗುರಿಯಾಗಿದೆ. ಇಲ್ಲಿದೆ ಹೈಲೈಟ್ಸ್.

ಹೈದರಾಬಾದ್(ಏ.21): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ತವರಿನ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ SRH ಸತತ 2ನೇ ಗೆಲುವಿನ ಸಿಹಿಕಿ ಕಂಡರೆ, ಮಹತ್ವದ ಪಂದ್ಯದಲ್ಲಿ KKR ಮಗ್ಗರಿಸೋ ಮೂಲಕ ಸತತ 5ನೇ ಸೋಲು ಕಂಡಿದೆ.

ಗೆಲುವಿಗೆ 161 ರನ್ ಟಾರ್ಗೆಟ್ ಪಡೆದ ಸನ್ ರೈಸರ್ಸ್ ಯಾವ ಹಂತದಲ್ಲೂ ಆತಂಕ ಎದುರಿಸಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟಕ್ಕೆ SRH ಗೆಲುವಿನ ಹಾದಿ ಸುಗಮಗೊಂಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಲು 6 ಬೌಲರ್‌ಗಳನ್ನು ಕೆಕೆಆರ್ ಕಣಕ್ಕಿಳಿಸಿದರೂ ಯಾವುದೇ ಪ್ರಯೋಜನವಾಗಿಲಿಲ್ಲ.

ವಾರ್ನರ್ ಹಾಗೂ ಬೈರ್‌ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 131 ರನ್ ಜೊತೆಯಾ ನೀಡಿತು. ವಾರ್ನರ್ 38 ಎಸೆತದಲ್ಲಿ 67 ರನ್ ಸಿಡಿಸಿತು. ಜಾನಿ ಬೈರ್‌ಸ್ಟೋ ಅಜೇಯ 80 ರನ್ ಸಿಡಿಸಿದರು. ಇತ್ತ ನಾಯಕ ಕೇನ್ ವಿಲಿಯಮ್ಸನ್ 8 ರನ್ ಕಾಣಿಕೆ ನೀಡಿದರು. ಈ ಮೂಲಕ ಹೈದರಾಬಾದ್ 15 ಓವರ್‌ಗಳಲ್ಲಿ 1 ವಿಕೆಚ್ ಕಳೆದುಕೊಂಡು  ಗೆಲುವು ಸಾಧಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು