IPL 2019: ಸೋಲಿನಿಂದ ಹೊರಬಂದ ರಾಜಸ್ಥಾನ- ಮುಂಬೈಗೆ ತವರಿನಲ್ಲಿ ಶಾಕ್!

Published : Apr 13, 2019, 07:46 PM ISTUpdated : Apr 13, 2019, 08:50 PM IST
IPL 2019: ಸೋಲಿನಿಂದ ಹೊರಬಂದ ರಾಜಸ್ಥಾನ- ಮುಂಬೈಗೆ ತವರಿನಲ್ಲಿ ಶಾಕ್!

ಸಾರಾಂಶ

ತವರಿನಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ ರಾಯಲ್ಸ್ ಶಾಕ್ ನೀಡಿದೆ. ಸೋಲಿನಿಂದ ಹತಾಶೆಗೊಂಡಿದ್ದ ರಾಜಸ್ಥಾನ 4 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಮುಂಬೈ(ಏ.13): ಮುಂಬೈ ಇಂಡಿಯನ್ಸ್ ವಿರುದ್ಧದ  ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 4 ವಿಕೆಟ್ ಗೆಲುವು ಸಾಧಿಸಿದೆ. ಜೋಸ್ ಬಟ್ಲರ್ ಹೋರಾಟ, ಅಂತಿಮ ಹಂತದಲ್ಲಿ ಶ್ರೇಯಸ್ ಗೋಪಾಲ್ ಜವಾಬ್ದಾರಿಯುತ ಬ್ಯಾಟಿಂಗ್‍‌ನಿಂದ ರಾಜಸ್ಥಾನ 4 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಸೋಲಿನ ಸುಳಿಯಿಂದ ರಾಜಸ್ಥಾನ ಪಾರಾಗಿದೆ.

"

ಗೆಲುವಿಗೆ 188 ರನ್ ಟಾರ್ಗೆಟ್ ಪಡೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆ ಹಾಗೂ ಜೋಸ್ ಬಟ್ಲರ್ ಸ್ಫೋಟಕ ಆರಂಭ ನೀಡಿದರು.  ರಹಾನೆ 37 ರನ್ ಸಿಡಿಸಿ ಔಟಾದರು. ಆದರೆ ಬಟ್ಲರ್ ಹೋರಾಟ ಮುಂದುವರಿಸಿದರು.  ಬಟ್ಲರ್ ಅಬ್ಬರದಿಂದ ರಾಜಸ್ಥಾನ ಸುಲಭ ಗೆಲುವಿನ ಹಾದಿ ತುಳಿಯಿತು. 

ಇನ್ನೇನು ಗೆಲುವು ನಮ್ಮದೆ ಎಂದು ಸಂಭ್ರಮಿಸೋ ಹೊತ್ತಿಗೆ ಬಟ್ಲರ್ ವಿಕೆಟ್ ಪತನಗೊಂಡಿತು. ಬಟ್ಲರ್ 43 ಎಸೆತದಲ್ಲಿ 89 ರನ್ ಸಿಡಿಸಿ ಔಟಾದರು. ಬಟ್ಲರ್ ವಿಕೆಟ್ ಪತನದ ಬೆನ್ನಲ್ಲೇ, ರಾಜಸ್ಥಾನ ಸಂಕಷ್ಟಕ್ಕೆ ಸಿಲುಕಿತು.  ಸಂಜು ಸಾಮ್ಸನ್ 31 ರನ್ ಸಿಡಿಸಿ ಔಟಾದರು. ರಾಜಸ್ಥಾನ ದಿಢೀರ್ ಕುಸಿತ ಕಂಡಿತು.

 ರಾಹುಲ್ ತ್ರಿಪಾಠಿ, ಲಿಯಾಮ್ ಲಿವಿಂಗ್‌ಸ್ಟೋನ್ ಅಬ್ಬರಿಸಲಿಲ್ಲ. ಸ್ಟೀವ್ ಸ್ಮಿತ್ ಅಬ್ಬರಿಸಲಿಲ್ಲ. ಕನ್ನಡಿಗ ಶ್ರೇಯಸ್ ಗೋಪಾಲ್ ರಾಜಸ್ಥಾನ ಆತಂಕ ದೂರ ಮಾಡಿದರು. ಅಜೇಯ 13 ರನ್ ಸಿಡಿಸೋ ಮೂಲಕ ರಾಜಸ್ಥಾನ ತಂಡ 4 ವಿಕೆಟ್ ರೋಚಕ ಗೆಲವು ಸಾಧಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!