ಮುಂಬೈ ದಾಳಿಗೆ ಕುಸಿದ ಡೆಲ್ಲಿ- ರೋಹಿತ್ ಪಡೆಗೆ 40 ರನ್ ಗೆಲುವು

Published : Apr 18, 2019, 11:29 PM IST
ಮುಂಬೈ ದಾಳಿಗೆ ಕುಸಿದ ಡೆಲ್ಲಿ- ರೋಹಿತ್ ಪಡೆಗೆ 40 ರನ್ ಗೆಲುವು

ಸಾರಾಂಶ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯ ಹಲವು ತಿರುಗಳಿಗೆ ಸಾಕ್ಷಿಯಾಯಿತು. ಆರಂಭದಲ್ಲಿ ಡೆಲ್ಲಿ ಮೇಲುಗೈ ಸಾಧಿಸಿದರೆ, ಬಳಿಕ ಮುಂಬೈ ಅಬ್ಬರಿಸಿತು. ರೋಚಕ ಘಟ್ಟ ತಲುಪಿದ ಪಂದ್ಯದಲ್ಲಿ ಮುಂಬೈ 40  ರನ್ ಗೆಲುವು ಸಾಧಿಸಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ. 

ದೆಹಲಿ(ಏ.18): ತವರಿನಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಿರಾಸೆಯಾಗಿದೆ. ಮುಂಬೈ ವೇಗಿ ರಾಹುಲ್ ಚಹಾರ್ ದಾಳಿಗೆ ಡೆಲ್ಲಿ ತತ್ತರಿಸಿತು. ಹೀಗಾಗಿ ರೋಹಿತ್ ಶರ್ಮಾ ಸೈನ್ಯದ ವಿರುದ್ಧ ಡೆಲ್ಲಿ 40 ರನ್ ಸೋಲು ಅನುಭವಿಸಿದೆ. ಇತ್ತ ಮುಂಬೈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

ಗೆಲುವಿಗೆ 169 ರನ್ ಟಾರ್ಗೆಟ್ ಪಡೆ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್ ಹಾಗೂ ಪೃಥ್ವಿ ಶಾ 49 ರನ್ ಜೊತೆಯಾಟ ನೀಡಿದರು. ಧವನ್ 35 ರನ್ ಕಾಣಿಕೆ ನೀಡಿದರೆ, ಪೃಥ್ವಿ ಶಾ 20 ರನ್ ಸಿಡಿಸಿ ಔಟಾದರು. ಟಾರ್ಗೆಟ್ ಚೇಸ್ ಮಾಡೋ ವಿಶ್ವಾಸದಲ್ಲಿದ್ದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿಗಳು ಶಾಕ್ ನೀಡಿದರು.

ಕಾಲಿನ್ ಮುನ್ರೊ,  ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ನಿರಾಸೆ ಮೂಡಿಸಿದರು. ಆತಂಕದಲ್ಲಿದ್ದ ತಂಡಕ್ಕೆ ಕ್ರಿಸ್ ಮೋರಿಸ್ ಹಾಗೂ ಅಕ್ಸರ್ ಪಟೇಲ್ ಆಸರೆಯಾದರು. ಮಾರಿಸ್ 11 ರನ್  ಸಿಡಿಸಿ ಔಟಾದರು. ಕೀಮೋ ಪೌಲ್ ರನೌಟ್‌ಗೆ ಬಲಿಯಾದರು. ಹೋರಾಟ ನೀಡಿದ ಅಕ್ಸರ್ ಪಟೇಲ್ 26 ರನ್ ಸಿಡಿಸಿ ಔಟಾದರು. ಡೆಲ್ಲಿ 9 ವಿಕೆಟ್ ನಷ್ಟಕ್ಕೆ 128 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?