
ಚೆನ್ನೈ(ಏ.26): ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಎರಡು ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ದಡ ಸೇರಿದೆ. ಚೆನ್ನೈನ ಚಿಪಾಕ್ ಮೈದಾನದಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 46 ರನ್ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಗೆಲುವಿಗೆ 156 ರನ್ ಟಾರ್ಗೆಟ್ ಪಡೆದ ಚೆನ್ನೈ ತಂಡಕ್ಕೆ ಮುಂಬೈ ವೇಗಿಗಳು ಶಾಕ್ ನೀಡಿದರು. ಆರಂಭದಲ್ಲೇ ಶೇನ್ ವ್ಯಾಟ್ಸನ್ ವಿಕೆಟ್ ಪತನಗೊಂಡಿತು ವ್ಯಾಟ್ಸನ್ ಕೇವಲ 8 ರನ್ ಸಿಡಿಸಿ ಔಟಾದರು. ನಾಯಕ ಸುರೇಶ್ ರೈನಾ 2 ರನ್ ಸಿಡಿಸಿದರೆ, ಅಂಬಾಟಿ ರಾಯುಡು ಶೂನ್ಯ ಸುತ್ತಿದರು. ಆದರೆ ಮುರಳಿ ವಿಜಯ್ ಹೋರಾಟ ಮುಂದುವರಿಸಿದರು.
ಕೇದಾರ್ ಜಾಧವ್ 6, ಧ್ರುವ್ ಶೊರೆ 5 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಮುರಳಿ ವಿಜಯ್ 38 ರನ್ ಸಿಡಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. 66 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ csk ಸೋಲಿನ ಹಾದಿ ಹಿಡಿಯಿತು. ಡ್ವೇನ್ ಬ್ರಾವೋ 20 ರನ್ ಸಿಡಿಸಿ ಔಟಾದರು. ದೀಪಕ್ ಚಹಾರ್ ಶೂನ್ಯಕ್ಕೆ ಔಟಾದರು. ಮಿಚೆಲ್ ಸ್ಯಾಂಟ್ನರ್ 22 ರನ್ ಸಿಡಿಸಿ ಔಟಾಗುತ್ತಿದ್ದಂತೆ csk 17.4 ಓವರ್‌ಗಳಲ್ಲಿ 109 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮುಂಬೈ 46 ರನ್ ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.