ಐಪಿಎಲ್ ಹರಾಜು: ಕೊನೆ ಕ್ಷಣದಲ್ಲಿ ನಾಲ್ವರು ಸೇರ್ಪಡೆ-ಪಟ್ಟಿ 350ಕ್ಕೆ ಏರಿಕೆ!

By Web Desk  |  First Published Dec 17, 2018, 10:32 PM IST

ಐಪಿಎಲ್ ಹರಾಜಿಗೆ ಬಿಸಿಸಿಐ ಅಂತಿಮ ಸಿದ್ಧತೆಯಲ್ಲಿದೆ. ಆದರೆ ಇನ್ನೊಂದು ದಿನ ಬಾಕಿ ಇರುವಾಗಲೇ ಆಟಗಾರರ ಹರಾಜು ಪಟ್ಟಿಗೆ ನಾಲ್ವರನ್ನ ಸೇರ್ಪಡಿಸಲಾಗಿದೆ. ಹಾಗಾದರೆ ನೂತನವಾಗಿ ಹರಾಜು ಪಟ್ಟಿ ಸೇರಿಕೊಂಡ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.


ಜೈಪುರ(ಡಿ.17): ಐಪಿಎಲ್ ಹರಾಜಿಗೆ ಬಿಸಿಸಿಐ ಸಕಲ ಸಿದ್ದತೆ ಮಾಡಿಕೊಂಡಿದೆ. ನಾಳೆ(ಡಿ.18) ಜೈಪುರದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. 1000 ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ಹೆಸರನ್ನ ನೊಂದಣಿ ಮಾಡಿಕೊಂಡಿದ್ದರು. ಇದರಲ್ಲಿ 346 ಕ್ರಿಕೆಟಿಗರನ್ನ ಬಿಸಿಸಿಐ ಆರಂಭದಲ್ಲಿ ಶಾರ್ಟ್ ಲಿಸ್ಟ್ ಮಾಡಿತ್ತು. ಇದೀಗ ಕೊನೆ ಕ್ಷಣದಲ್ಲಿ ಪಟ್ಟಿಯನ್ನ ವಿಸ್ತರಿಸಿದೆ.

ಹರಾಜಿಗೂ ಮೊದಲು ಬಿಸಿಸಿಐ ನಾಲ್ವರು ಆಟಗಾರರನ್ನ ಪಟ್ಟಿಗೆ ಸೇರ್ಪಡಿಸಿದೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾ ಕ್ರಿಕೆಟಿಗ ರಿಲೆ ಮೆರಿಡಿತ್ ಹಾಗೂ ಭಾರತೀಯ ಆಟಗಾರರಾದ ಮಯಾಂಕ್ ದಗಾರ್ ಹಾಗೂ ಪ್ರಣವ್ ಗುಪ್ತಾ ಅವರನ್ನ ಹರಾಜಿನ ಲಿಸ್ಟ್‌ಗೆ ಸೇರಿಸಿಕೊಳ್ಳಲಾಗಿದೆ.

Tap to resize

Latest Videos

ಬಿಸಿಸಿಐ ನೂತನವಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಟ್ಟು 350 ಕ್ರಿಕೆಟಿಗರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 350 ಕ್ರಿಕೆಟಿಗರಲ್ಲಿ 8 ಫ್ರಾಂಚೈಸಿಗಳು ಒಟ್ಟು 70 ಕ್ರಿಕೆಟಿಗರನ್ನ ಆಯ್ಕೆ ಮಾಡಲಿದೆ.

click me!