#IPL2019: ಹರಾಜಿನಲ್ಲಿ ಮತ್ತೆ ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಖರೀದಿಸುತ್ತಾ KXIP..?

Published : Dec 17, 2018, 08:20 PM IST
#IPL2019: ಹರಾಜಿನಲ್ಲಿ ಮತ್ತೆ ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಖರೀದಿಸುತ್ತಾ KXIP..?

ಸಾರಾಂಶ

ಕಳೆದ ಆವೃತ್ತಿಯ ಹರಾಜಿನಲ್ಲಿ ಸಾಕಷ್ಟು ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ KXIP ಪ್ರಾಂಚೈಸಿ ಈ ಬಾರಿಯ ಹರಾಜಿಗೂ ಮುನ್ನ ಕೇವಲ 9 ಆಟಗಾರನ್ನಷ್ಟೇ ಉಳಿಸಿಕೊಂಡಿದೆ.

ಬೆಂಗಳೂರು[ಡಿ.17]: ಕಳೆದ 11 ಆವೃತ್ತಿಗಳಲ್ಲೂ ಪ್ರಶಸ್ತಿಯ ಬರ ಅನುಭವಿಸುತ್ತಾ ಬಂದಿರುವ ಪ್ರೀತಿ ಜಿಂಟಾ ಸಹ ಒಡೆತನದ ಕಿಂಗ್ಸ್ ಇಲೆವನ್ ಪಂಜಾಬ್ ಈ ಬಾರಿ ಮತ್ತೆ ಹರಾಜಿನಲ್ಲಿ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆಯಿದೆ.

ಐಪಿಎಲ್ 2019: ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಹೀಗಿದೆ!

ಕಳೆದ ಆವೃತ್ತಿಯ ಹರಾಜಿನಲ್ಲಿ ಸಾಕಷ್ಟು ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದ KXIP ಪ್ರಾಂಚೈಸಿ ಈ ಬಾರಿಯ ಹರಾಜಿಗೂ ಮುನ್ನ ಕೇವಲ 9 ಆಟಗಾರನ್ನಷ್ಟೇ ಉಳಿಸಿಕೊಂಡಿದೆ. ಈಗಾಗಲೇ ಕ್ರಿಸ್ ಗೇಲ್, ಕೆ.ಎಲ್ ರಾಹುಲ್ ಅವರಂತಹ ಟಿ20 ತಜ್ಞ ಬ್ಯಾಟ್ಸ್’ಮನ್’ಗಳನ್ನು ಉಳಿಸಿಕೊಂಡಿರುವ ಪ್ರೀತಿ ಪಡೆ ಈ ಬಾರಿಯ ಹರಾಜಿನಲ್ಲಿ ಯಾರನ್ನು ಖರೀದಿಸಬಹುದು ಎನ್ನುವ ಕುತೂಹಲ ಜೋರಾಗಿದೆ. ಪಂಜಾಬ್ ತಂಡದ ಜೇಬಿನಲ್ಲಿ ಬರೋಬ್ಬರಿ 36.20 ಕೋಟಿ ಹಣವಿದ್ದು, ಮತ್ತಷ್ಟು ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಖರೀದಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

#IPL2019: ಹರಾಜಿಗೂ ಮುನ್ನ ಹೀಗಿದೆ ನೋಡಿ ರಾಜಸ್ಥಾನ ರಾಯಲ್ಸ್ ಪಡೆ

ಡಿಸೆಂಬರ್ 18ರಂದು ಜೈಪುರಲ್ಲಿ ಆಟಗಾರರ ಹರಾಜು ನಡೆಯಲಿದ್ದು, 346 ಆಟಗಾರರು ಹರಾಜಿನಲ್ಲಿ ಲಭ್ಯವಿದ್ದಾರೆ. ಇದರಲ್ಲಿ 8 ಪ್ರಾಂಚೈಸಿಗಳು ಕೇವಲ 70 ಆಟಗಾರರನ್ನಷ್ಟೇ ಖರೀದಿಸಬಹುದು.

ಹರಾಜಿಗೂ ಮುನ್ನ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಹೀಗಿದೆ ನೋಡಿ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!