2019 ಐಪಿಎಲ್ ಹರಾಜು: ಐವರಿಗೆ ಕಾಡುತ್ತಿದೆ ಅನ್‌ಸೋಲ್ಡ್ ಭಯ!

By Web DeskFirst Published Nov 25, 2018, 4:28 PM IST
Highlights

2019ರ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗೋ ಆಟಗಾರರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಆದರೆ ಇದೇ ಹರಾಜು ಕೆಲ ಆಟಗಾರರಿಗೆ ಭಯ ಹುಟ್ಟಿಸಿದೆ. ಕಾರಣ ಟೀಂ ಇಂಡಿಯಾದ ಐವರು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗೋ ಸಾಧ್ಯತೆ ಕಡಿಮೆ.

ಬೆಂಗಳೂರು(ನ.25): 2019ರ ಐಪಿಎಲ್ ಟೂರ್ನಿ ಹರಾಜಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಡಿಸೆಂಬರ್ 18 ರಂದು ಜೈಪುರ್‌ನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ ಹರಾಜು ಭಾರಿ ಕುತೂಹಲ ಕೆರಳಿಸಿದೆ. ಆದರೆ ಐವರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅನ್‌ಸೋಲ್ಡ್ ಭಯ ಕಾಡುತ್ತಿದೆ.

ಯುವರಾಜ್ ಸಿಂಗ್
ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಸೆಯಿಂದ ಯುವಿ ಸದ್ಯ ದೇಸಿ ಟೂರ್ನಿಯಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇನ್ನು 2018ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದ ಯುವರಾಜ್ ಸಿಂಗ್ 8 ಪಂದ್ಯಗಳಿಂದ ಕೇವಲ 65 ರನ್ ಸಿಡಿಸಿದ್ದರು. 37 ವರ್ಷದ ಯುವಿ ಈ ಭಾರಿಯ ಹರಾಜಿನಲ್ಲಿ ಮಾರಾಟವಾಗೋ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

ವಿನಯ್ ಕುಮಾರ್
ಐಪಿಎಲ್ ಟೂರ್ನಿಯಲ್ಲಿ 100 ಪಂದ್ಯಗಳನ್ನಾಡಿದ ಹೆಗ್ಗಳಿಕೆಗೆ ಪಾತ್ರರಾಗಿರೋ ಕನ್ನಡಿಗ ವಿನಯ್ ಕುಮಾರ್, ಕಳೆದ 5 ಆವೃತ್ತಿಗಳಲ್ಲಿ ಆಡಿರೋದು ಕೇವಲ 28 ಪಂದ್ಯ ಮಾತ್ರ. 2018ರ ಐಪಿಎಲ್ ಟೂರ್ನಿಯ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 1.5 ಓವರ್‌ಗಳಲ್ಲಿ 35 ರನ್ ನೀಡಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಈಗಾಗಲೇ ವಿನಯ್ ಕುಮಾರ್‌ನ್ನ ತಂಡದಿಂದ ರಿಲೀಸ್ ಮಾಡಿದೆ. ಇದೀಗ ಈ ಬಾರಿಯ ಹರಾಜಿನಲ್ಲಿ ವಿನಯ್ ಮಾರಾಟವಾಗೋ ಸಾಧ್ಯತೆ ಕಡಿಮೆ.

ಮೊಹಮ್ಮದ್ ಶಮಿ
ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಶಮಿ ಟಿ20 ಕ್ರಿಕೆಟ್‌ನಲ್ಲಿ ಎಡವುತ್ತಿದ್ದಾರೆ.  2018ರ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯದಿಂದ 3 ವಿಕೆಟ್ ಕಬಳಿಸಿದ ಶಮಿ, 10 ಎಕಾನಾಮಿಯಲ್ಲಿ ರನ್ ನೀಡಿದ್ದರು. ಇಷ್ಟೇ ಅಲ್ಲ ಒಟ್ಟು 35 ಐಪಿಎಲ್ ಪಂದ್ಯಗಳಿಂದ ಶಮಿ 21 ವಿಕೆಟ್ ಕಬಳಿಸಿದ್ದಾರೆ. 

ನಮನ್ ಓಜಾ
ಸನ್‌ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ಕೀಪರ್ ಸಮಸ್ಸೆಯಿಂದ ನಮನ್ ಓಜಾಗೆ ಹೆಚ್ಚಿನ ಅವಕಾಶ ನೀಡಿತ್ತು. ಆದರೆ ನಮನ್ ಸ್ಥಾನ ಉಳಿಸಿಕೊಳ್ಳಲಿಲ್ಲ. ಹೀಗಾಗಿ 2018ರಲ್ಲಿ ತಂಡದಿಂದ ಕೈಬಿಟ್ಟಿತು. ದೆಹಲಿ ತಂಡ ಸೇರಿಕೊಂಡ ನಮನ್‌ಗೆ ರಿಷಬ್ ಪಂತ್ ಪೈಪೋಟಿ ನೀಡಿದರು. ದೆಹಲಿ ತಂಡದಿಂದಲೂ ನಮನ್ ಹೊರಬಿದ್ದಿದ್ದಾರೆ. 

ಗುರಕೀರತ್ ಸಿಂಗ್ ಮಾನ್
3 ಏಕದಿನ ಪಂದ್ಯ ಆಡೋ ಮೂಲಕ ಭಾರತೀರಿಗೆ ಪರಿಚವಾದ ಗುರಕೀರತ್ ಸಿಂಗ್ ಮಾನ್ ಟಿ20 ಯಲ್ಲಿ ಅಷ್ಟಕಷ್ಟೆ. 2018ರಲ್ಲಿ ಡೆಲ್ಲಿ ತಂಡ ಸೇರಿಕೊಂಡ ಗುರಕೀರತ್‌ ಒಂದೇ ಒಂದು ಪಂದ್ಯ ಆಡಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸೇಲಾಗೋದು ಡೌಟ್!

click me!