
ದೆಹಲಿ(ಸೆ.06): ಐಪಿಎಲ್ ಟೂರ್ನಿಯ ಕಳೆದ 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಕನಿಷ್ಠ ಹೋರಾಟ ನೀಡಿಲ್ಲ. ಪ್ರತಿ ಟೂರ್ನಿಯಲ್ಲಿ ಡೆಲ್ಲಿ ತಂಡದ ಕತೆ ಶೋಚನೀಯ. ಇದೀಗ 12ನೇ ಆವೃತ್ತಿಯಲ್ಲಿ ಡೆಲ್ಲಿ ತಂಡ ಮಹತ್ತರ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.
ಡೆಲ್ಲಿ ತಂಡ ಈಗಾಗಲೇ ಕೋಚ್ ಸ್ಥಾನಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಆಯ್ಕೆ ಮಾಡಲಾಗಿದೆ. ಇದೀಗ ತಂಡದ ಮೆಂಟರ್ ಆಗಿ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ನೇಮಕ ಮಾಡಲು ಮಾತುಕತೆ ನಡೆಸಲಾಗಿದೆ.
ಮೆಂಟರ್ ಸ್ಥಾನಕ್ಕೆ ಕುಂಬ್ಳೆ ಮನಒಲಿಸಲು ಈಗಾಗಲೇ ಮಾತುಕತೆ ನಡೆಸಲಾಗಿದೆ ಅನ್ನೋದನ್ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಫ್ರಾಂಚೈಸಿ ಮಾಲೀಕರಲ್ಲೊಬ್ಬರಾದ ಪರ್ತ್ ಜಿಂದಾಲ್ ಹೇಳಿದ್ದಾರೆ. ಆದರೆ ಇನ್ನು ಅಂತಿಮವಾಗಿಲ್ಲ ಎಂದಿದ್ದಾರೆ.
2015ರಲ್ಲಿ ರಿಕಿ ಪಾಂಟಿಂಗ್ ಹಾಗೂ ಅನಿಲ್ ಕುಂಬ್ಳೆ ಮುಂಬೈ ತಂಡದ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಇವಿಬ್ಬರ ಜೋಡಿಯನ್ನ ಮತ್ತೆ ಒಂದೂಗೂಡಿಸಿ ಪ್ರಶಸ್ತಿ ಗೆಲುವಿಗೆ ಡೆಲ್ಲಿ ತಂಡ ಕಸರತ್ತು ನಡೆಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.