ಡೆಲ್ಲಿ ಡೇರ್ ಡೆವಿಲ್ಸ್‌ಗೆ ಆಘಾತ- ತಂಡದ ಪ್ರಮುಖ ವಿಕೆಟ್ ಪತನ!

By Web DeskFirst Published Aug 28, 2018, 5:12 PM IST
Highlights

ಐಪಿಎಲ್ ಟೂರ್ನಿಯಲ್ಲಿ ಪ್ರತಿ ವರ್ಷ ದುಬಾರಿ ಬೆಲೆಗೆ ಆಟಗಾರರನ್ನ ಖರೀದಿಸಿ ಕಣಕ್ಕಿಳಿದ ಡೆಲ್ಲಿ ಡೇರ್ ಡೆವಿಲ್ಸ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ 2019ರ ಐಪಿಎಎಲ್ ಪ್ರಶಸ್ತಿ ಗೆಲುವಿಗೆ ಮಾಸ್ಟರ್ ಪ್ಲಾನ್ ಮಾಡಿದ್ದ ಡೆಲ್ಲಿ ತಂಡಕ್ಕೆ ಇದೀಗ ಆಘಾತ ಎದುರಾಗಿದೆ. 

ನವದೆಹಲಿ(ಆ.28): ಐಪಿಎಲ್ ಟೂರ್ನಿಯ ಕಳೆದ 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪ್ರತಿ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಆಟಗಾರರನ್ನ ಖರೀದಿಸಿದರೂ ತಂಡ ಮಾತ್ರ ಪ್ರಶಸ್ತಿ ಗೆಲ್ಲಲೇ ಇಲ್ಲ. ಇದೀಗ 2019ರ ಐಪಿಎಲ್ ಟೂರ್ನಿಗೆ ಪ್ರಾಥಮಿಕ ತಯಾರಿ ಆರಂಭಿಸಿದ ಡೆಲ್ಲಿ ತಂಡಕ್ಕೆ ದಿಢೀರ್ ಆಘಾತ ಎದುರಾಗಿದೆ.

ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಕಟ್ಟಿ ಬೆಳೆಸಿದ ಸಿಇಒ ಹೇಮಂತ್ ದುವಾ ದಿಢೀರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಎಂಆರ್ ಮಾಲೀಕತ್ವದ ಡೆಲ್ಲಿ ಫ್ರಾಂಚೈಸಿಯಲ್ಲಿ ಸಿಇಒ ರಾಜಿನಾಮೆ ಆತಂಕ ಹೆಚ್ಚಿಸಿದೆ.

ಐಪಿಎಲ್  ಆರಂಭದಿಂದಲೂ ಇಲ್ಲೀವರೆಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನನ್ನ ಜೀವನದ ಭಾಗವಾಗಿದೆ. ಇನ್ನು ಮುಂದೆಯೂ ಕೂಡ ಹಾಗೇ ಇರಲಿದೆ. ಡೆಲ್ಲಿ ಫ್ರಾಂಚೈಸಿ ಹೊಸ ಮ್ಯಾನೇಜ್ಮೆಂಟ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಹೀಗಾಗಿ ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಮಂತ್ ದುವಾ ಹೇಳಿದ್ದಾರೆ.

ಸೆಪ್ಟೆಂಬರ್ 1 ರಿಂದ ಹೇಮಂತ್ ಜೆಎಸ್‌ಡಬ್ಲೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಾನ್ ಎಕ್ಸುಕ್ಯುಟೀವ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಹೇಳಿದೆ.
 

click me!