
ಚೆನ್ನೈ(ಮೇ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ ತೀವ್ರ ಹೋರಾಟ ನಡೆಯುತ್ತಿದೆ. ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಚೆನ್ನೈ 4 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿದೆ. ಈ ಮೂಲಕ ಮುಂಬೈ ಗೆಲುವಿಗೆ 132 ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಚೆನ್ನೈ ಆರಂಭದಲ್ಲೇ ಫಾಪ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನು ಸುರೇಶ್ ರೈನಾ ಕೂಡ ಆಸರೆಯಾಗಲಿಲ್ಲ. ರೈನಾ 5 ರನ್ ಸಿಡಿಸಿ ಔಟಾದರು. ಇತ್ತ ಹೋರಾಟ ನೀಡೋ ಸೂಚನೆ ನೀಡಿದ ಶೇನ್ ವ್ಯಾಟ್ಸನ್ 10 ರನ್ ಸಿಡಿಸಿ ಔಟಾದರು. 32 ರನ್‌ಗೆ ಚೆನ್ನೈ 3 ವಿಕೆಟ್ ಕಳೆದುಕೊಂಡಿತು.
ಮುರಳಿ ವಿಜಯ್ 26 ರನ್ ಸಿಡಿಸಿ ಔಟಾದರು. ಅಂಬಾಟಿ ರಾಯುಡು ಹಾಗೂ ನಾಯಕ ಎಂ.ಎಸ್.ಧೋನಿ ಜೊತೆಯಾಟ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿತು. 31 ರನ್ ಸಿಡಿಸಿ ಅಬ್ಬರಿಸುತ್ತಿದ್ದ ಧೋನಿಗೆ ನೋ ಬಾಲ್ ಜೀವದಾನ ವರವಾಯಿತು. ರಾಯುಡು ಅಜೇಯ 42 ರನ್ ಸಿಡಿಸಿದರೆ, ಧೋನಿ ಅಜೇಯ 37 ರನ್ ಭಾರಿಸಿದರು. ಈ ಮೂಲಕ ಚೆನ್ನೈ 4 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.