IPL 2019: ಪುಲ್ವಾಮಾ ಹುತಾತ್ಮ ಕುಟುಂಬಕ್ಕೆ CSK 2 ಕೋಟಿ ನೆರವು!

By Web Desk  |  First Published Mar 23, 2019, 8:49 PM IST

ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ಚೆನ್ನೈ ನೆರವು ನೀಡಿದೆ. ಪಂದ್ಯದ ಆದಾಯ ನೀಡುವುದಾಗಿ ಘೋಷಿಸಿದ್ದ CSK ಫ್ರಾಂಚೈಸಿ, ಇದೀಗ ಚೆಕ್ ವಿತರಿಸಿದೆ. 


ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೋರಾಟ ನಡೆಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ CSK ಫ್ರಾಂಚೈಸಿ 2 ಕೋಟಿ ರೂಪಾಯಿ ಹಣವನ್ಮು ಪುಲ್ವಾಮಾ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ.

ಇದನ್ನೂ ಓದಿ:  IPL 2019:12ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಕೊಹ್ಲಿಗೆ ನಿರಾಸೆ!

Latest Videos

undefined

CSK ನಾಯಕ, ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಎಂ.ಎಸ್.ಧೋನಿ ಚೆಕ್ ವಿತರಿಸಿದರು. ಕಳೆದ ವಾರ CSK ಪಂದ್ಯದ ಆದಾಯವನ್ನು ಪುಲ್ವಾಮಾ ಹುತಾತ್ಮಯ ಯೋಧರ ಕುಟುಂಬಕ್ಕೆ ನೀಡುವುದಾಗಿ ಘೋಷಿಸಿತ್ತು. ಆದರಂತೆ ಇಂದು 2 ಕೋಟಿ ರೂಪಾಯಿ ಹಣವನ್ನು ನೀಡಿದೆ.

ಇದನ್ನೂ ಓದಿ:  ಐಪಿಎಲ್ ಆರಂಭಕ್ಕೂ ಮುನ್ನ ಮಗಳ ಜೊತೆ ರೋಹಿತ್ ಗಲ್ಲಿ ಬಾಯ್ ಸಾಂಗ್!

ಬಿಸಿಸಿಐ ಈಗಾಗಲೇ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದುಗೊಳಿಸಿ 20 ಕೋಟಿ ರೂಪಾಯಿ ನೆರವು ನೀಡಿದೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 25 ಲಕ್ಷ ರೂಪಾಯಿ ನೆರವು ನೀಡಿದೆ.  ಫೆ.14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ CRPF ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. 

click me!