ರೀಟೈನ್ ಮಾಡಿಕೊಳ್ಳುತ್ತೇನೆಂದು ಹೇಳಿ ಕೈಕೊಟ್ಟ ಆರ್’ಸಿಬಿ

First Published May 1, 2018, 3:22 PM IST
Highlights

ಪ್ರಸಕ್ತ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಕಣಕ್ಕಿಳಿದು ಶತಕ, ಅರ್ಧಶತಕಗಳ ಮೂಲಕ ಎದುರಾಳಿ ಬೌಲರ್’ಗಳ ನಿದ್ದೆಗೆಡಿಸಿರುವ ಗೇಲ್ ಆರ್’ಸಿಬಿ ತಮಗೆ ಕೈಕೊಟ್ಟ ಬಗ್ಗೆ ಮಾತನಾಡಿದ್ದಾರೆ. 

ಬೆಂಗಳೂರು[ಮೇ.01]: ಚುಟುಕು ಕ್ರಿಕೆಟ್’ನ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ಇದೇ ಮೊದಲ ಬಾರಿಗೆ ಐಪಿಎಲ್’ನ ಆಟಗಾರರ ಹರಾಜು ಪ್ರಕ್ರಿಯೆ ಬಗ್ಗೆ ತುಟಿಬಿಚ್ಚಿದ್ದು, ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪರ ಕಣಕ್ಕಿಳಿದು ಶತಕ, ಅರ್ಧಶತಕಗಳ ಮೂಲಕ ಎದುರಾಳಿ ಬೌಲರ್’ಗಳ ನಿದ್ದೆಗೆಡಿಸಿರುವ ಗೇಲ್ ಆರ್’ಸಿಬಿ ತಮಗೆ ಕೈಕೊಟ್ಟ ಬಗ್ಗೆ ಮಾತನಾಡಿದ್ದಾರೆ. 
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಗೇಲ್, ‘ಆರ್‌ಸಿಬಿ ನಡೆ ಭಾರೀ ಬೇಸರ ಮೂಡಿಸಿತು. ಹರಾಜಿಗೂ ಮುನ್ನ ಕರೆ ಮಾಡಿ ತಂಡಕ್ಕೆ ನಿಮ್ಮ ಅಗತ್ಯವಿದೆ. ಉಳಿಸಿಕೊಳ್ಳುವುದಾಗಿ ಹೇಳಿದ್ದರು. ನಾನು ನಿರೀಕ್ಷಿಸುತ್ತಿದ್ದೆ, ಆದರೆ ಮತ್ತೆ ನನಗೆ ಕರೆ ಬರಲೇ ಇಲ್ಲ. ಇದರಿಂದ ನನ್ನ ಅವಶ್ಯಕತೆ ಇಲ್ಲ ಎಂದು ನಾನೇ ಅರ್ಥ ಮಾಡಿಕೊಂಡೆ. ನಾನು ಯಾರೊಂದಿಗೂ ಜಗಳವಾಡಲು ಇಚ್ಛಿಸುವುದಿಲ್ಲ. ಕೆರಿಬಿ
ಯನ್, ಬಾಂಗ್ಲಾ ಟಿ20 ಲೀಗ್‌'ಗಳಲ್ಲಿ ಉತ್ತಮ ಆಟವಾಡಿದ್ದೆ. ಶತಕ ಬಾರಿಸಿದ್ದೆ. ಅಂಕಿ-ಅಂಶಗಳು ಸುಳ್ಳು ಹೇಳುವುದಿಲ್ಲ. ಗರಿಷ್ಠ ಶತಕ, ಗರಿಷ್ಠ ಸಿಕ್ಸರ್. ಕ್ರಿಸ್ ಗೇಲ್ ಬ್ರ್ಯಾಂಡ್‌'ಗೆ ಇವೆಲ್ಲಾ ಪೂರಕವಲ್ಲ ಎಂದಾದರೆ ಮತ್ತೇನು ಎನ್ನುವುದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
ಹರಾಜಾಗದಿದ್ದಿದ್ದು ಅಶ್ಚರ್ಯಕರ: ಆಟಗಾರರ ಹರಾಜಿನ ಮೊದಲೆರಡು ಸುತ್ತುಗಳಲ್ಲಿ ಬಿಕರಿಯಾಗದೆ ಉಳಿದಿದ್ದು ಆಶ್ಚರ್ಯ ಮೂಡಿಸಿತು ಎಂದು ಗೇಲ್ ಒಪ್ಪಿಕೊಂಡಿದ್ದಾರೆ. ‘ನಿಜ ಹೇಳುತ್ತೇನೆ, ಯಾವ ತಂಡವೂ ನನ್ನನ್ನು ಖರೀದಿಸದೆ ಇರುವುದನ್ನು ಕಂಡು ಆಶ್ಚರ್ಯವಾಯಿತು. ತೆರೆ ಮರೆಯಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ. ಆದರೆ ಈ ರೀತಿಯ ಘಟನೆಗಳು ಸಹಜ ಎಂದು ನನಗೆ ತಿಳಿದಿದೆ. ಆ ಘಟನೆಯಿಂದ ನಾನು ಮುಂದೆ ಸರಿದಿದ್ದೇನೆ. ಪಂಜಾಬ್ ತಂಡದಲ್ಲಿ ಆಡು ವುದು ಖುಷಿ ನೀಡಿದೆ’ ಎಂದು ಗೇಲ್ ಹೇಳಿಕೊಂಡಿದ್ದಾರೆ.

click me!