IPL 2018 ಆರಂಭಿಕ ಆಘಾತದ ನಡುವೆಯೂ ಸಿಡಿದ ಕೆಕೆಆರ್

First Published May 23, 2018, 9:02 PM IST
Highlights

ಇಲ್ಲಿನ ಈಡನ್’ಗಾರ್ಡನ್’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭದಲ್ಲೇ ಮುಗ್ಗರಿಸಿತು. ಕನ್ನಡಿಗ ಗೌತಮ್ ಆರಂಭಿಕ ಬ್ಯಾಟ್ಸ್’ಮನ್ ನರೈನ್ ಹಾಗೂ ಉತ್ತಪ್ಪ ಅವರನ್ನು ಪೆವಿಲಿಯನ್’ಗೆ ಅಟ್ಟಿದರೆ, ಲಿನ್ ಬಲಿಪಡೆಯುವಲ್ಲಿ ಮತ್ತೋರ್ವ ಕನ್ನಡಿಗ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. 

ಕೋಲ್ಕತಾ[ಮೇ.23]: ಮಾಡು ಇಲ್ಲವೇ ಮಡಿ ಎಂಬಂತಿರುವ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ನಾಯಕ ದಿನೇಶ್ ಕಾರ್ತಿಕ್ ಆಕರ್ಷಕ ಅರ್ಧಶತಕ ಹಾಗೂ ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 169 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಇಲ್ಲಿನ ಈಡನ್’ಗಾರ್ಡನ್’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಆರಂಭದಲ್ಲೇ ಮುಗ್ಗರಿಸಿತು. ಕನ್ನಡಿಗ ಗೌತಮ್ ಆರಂಭಿಕ ಬ್ಯಾಟ್ಸ್’ಮನ್ ನರೈನ್ ಹಾಗೂ ಉತ್ತಪ್ಪ ಅವರನ್ನು ಪೆವಿಲಿಯನ್’ಗೆ ಅಟ್ಟಿದರೆ, ಲಿನ್ ಬಲಿಪಡೆಯುವಲ್ಲಿ ಮತ್ತೋರ್ವ ಕನ್ನಡಿಗ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. ಇನ್ನು ನಿತಿಶ್ ರಾಣಾ ಆಟ ಕೇವಲ 3 ರನ್’ಗಳಿಗೆ ಸೀಮಿತವಾಯಿತು.
ಬಲತುಂಬಿದ ಕಾರ್ತಿಕ್-ರಸೆಲ್: ಒಂದು ಹಂತದಲ್ಲಿ 51 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್’ಗೆ ನಾಯಕ ದಿನೇಶ್ ಕಾರ್ತಿಕ್[52] ಹಾಗೂ ಶುಭ್’ಮನ್ ಗಿಲ್[28] ಆಸರೆಯಾದರು. ಈ ಜೋಡಿ ತಂಡವನ್ನು ನೂರರ ಗಡಿ ದಾಟಿಸಿದರು. ಕೊನೆಯಲ್ಲಿ ಸ್ಫೋಟಕ ಆಟವಾಡಿದ ಆ್ಯಂಡ್ರೆ ರಸೆಲ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ 49 ರನ್ ಬಾರಿಸಿ ಅಜೇಯರಾಗುಳಿದರು.
ರಾಜಸ್ಥಾನ ರಾಯಲ್ಸ್ ಪರ ಕೆ. ಗೌತಮ್, ಆರ್ಚರ್ ಹಾಗೂ ಬೆನ್ ಲಾಫ್ಲಿನ್ ತಲಾ 2 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
KKR: 169/7
ದಿನೇಶ್ ಕಾರ್ತಿಕ್: 52
ಗೌತಮ್: 15/2
[* ವಿವರ ಅಪೂರ್ಣ]

click me!