ಆರ್’ಸಿಬಿಗಿಂದು ಅಗ್ನಿ ಪರೀಕ್ಷೆ; ಸೋತರೂ ಇದೆ ಅವಕಾಶ..!

First Published May 19, 2018, 3:11 PM IST
Highlights

ಒಂದೊಮ್ಮೆ ಈ ಪಂದ್ಯವನ್ನು ಸೋತರೂ ಆರ್‌ಸಿಬಿ ಪ್ಲೇ-ಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಬೀಳುವುದಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಆರ್‌ಸಿಬಿ ಭವಿಷ್ಯವನ್ನು ನಿರ್ಧರಿಸಲಿವೆ. ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 12 ಅಂಕ ಪಡೆದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್‌ರೇಟ್ +0.264 ಇದ್ದು, ಮುಂಬೈಗಿಂತ ಹಿಂದಿದೆ. ಅಂತಿಮ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಬೇಕು. ಮುಂಬೈ ವಿರುದ್ಧ ಡೆಲ್ಲಿ, ಪಂಜಾಬ್ ವಿರುದ್ಧ ಚೆನ್ನೈ ಗೆದ್ದರೆ ಆರ್’ಸಿಬಿ ಹಾದಿ ಸುಗಮಗೊಳ್ಳಲಿದೆ.

ಬೆಂಗಳೂರು[ಮೇ.19]: ಅತ್ತ ವಿಶ್ವಾಸಮತ ಸಾಬೀತು ಪಡಿಸಲು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ಸಂಜೆ 4ಕ್ಕೆ ಮಹೂರ್ತ ನಿಗದಿ ಪಡಿಸಿದ್ದರೆ, ಇತ್ತ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ‘ಕಪ್ ನಮ್ದೇ’ ಎನ್ನುತ್ತಿರುವ ಆರ್’ಸಿಬಿಗೂ ಇದೇ ಸಮಯಕ್ಕೆ ಸರಿಯಾಗಿ ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಸಂಜೆ ೪ ಗಂಟೆಯಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಲಿದ್ದು, ಲೀಗ್ ಹಂತದಲ್ಲಿ ಆರ್‌ಸಿಬಿಗಿದು ಕೊನೆಯ ಪಂದ್ಯವಾಗಿದ್ದು ಅತ್ಯಂತ ಮಹತ್ವದಾಗಿದೆ.
ಒಂದೊಮ್ಮೆ ಈ ಪಂದ್ಯವನ್ನು ಸೋತರೂ ಆರ್‌ಸಿಬಿ ಪ್ಲೇ-ಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಬೀಳುವುದಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಆರ್‌ಸಿಬಿ ಭವಿಷ್ಯವನ್ನು ನಿರ್ಧರಿಸಲಿವೆ. ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 12 ಅಂಕ ಪಡೆದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್‌ರೇಟ್ +0.264 ಇದ್ದು, ಮುಂಬೈಗಿಂತ ಹಿಂದಿದೆ. ಅಂತಿಮ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಬೇಕು. ಮುಂಬೈ ವಿರುದ್ಧ ಡೆಲ್ಲಿ, ಪಂಜಾಬ್ ವಿರುದ್ಧ ಚೆನ್ನೈ ಗೆದ್ದರೆ ಆರ್’ಸಿಬಿ ಹಾದಿ ಸುಗಮಗೊಳ್ಳಲಿದೆ.
ಡೆಲ್ಲಿ, ಪಂಜಾಬ್, ಸನ್‌ರೈಸರ್ಸ್‌ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಆರ್‌ಸಿಬಿ, ಲೀಗ್ ಹಂತದ ತನ್ನ ಕೊನೆ ಪಂದ್ಯದಲ್ಲೂ ಇದೇ ಲಯ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. 
ಮತ್ತೊಂದೆಡೆ ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 7ರಲ್ಲಿ ಸೋಲುಂಡಿರುವ ರಾಯಲ್ಸ್ ಸಹ 12 ಅಂಕಗಳಿಸಿದ್ದು, ಪ್ಲೇ-ಆಫ್ ಹಂತಕ್ಕೇರಲು ಶನಿವಾರದ ಪಂದ್ಯ ನಿರ್ಣಾಯಕವಾಗಿದೆ.
ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ವಿರಾಟ್ ಪಡೆಯ ಬ್ಯಾಟ್ಸ್‌ಮನ್‌ಗಳು ಸ್ಫೋಟಿಸಲೇಬೇಕಾಗಿದೆ. ಏಕೆಂದರೆ ತಂಡ ಬೌಲಿಂಗ್‌ಗಿಂತ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಅವಂಲಬಿತವಾಗಿದೆ. ಉಮೇಶ್ ಯಾದವ್ ಹಾಗೂ ಟಿಮ್ ಸೌಥಿ ಉತ್ತಮ ಲಯದಲ್ಲಿದ್ದು, ಇದೇ ಪ್ರದರ್ಶನ ಮುಂದುವರಿಸಬೇಕಿದೆ. ಗುರುವಾರ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ
ಅಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದು, ಆರ್‌ಸಿಬಿ ಬ್ಯಾಟಿಂಗ್ ಬಲವನ್ನು ಇಮ್ಮಡಿಗೊಳಿಸಿದೆ. ಇತ್ತ ತಂಡದ ಪ್ರಮುಖ ಬೆನ್ನೆಲುಬಾಗಿದ್ದ ಜೋಸ್ ಬಟ್ಲರ್, ಸ್ಟೋಕ್ಸ್ ಅಲಭ್ಯತೆ ರಾಯಲ್ಸ್ ತಂಡಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಸಂಜು ಸ್ಯಾಮ್ಸನ್, ಜೋಫ್ರಾ ಆರ್ಚರ್, ಕೆ.ಗೌತಮ್ ರಾಯಲ್ಸ್ ಪಾಲಿನ ಪ್ರಮುಖ ಟ್ರಂಪ್ ಕಾರ್ಡ್‌ಗಳಾಗಿದ್ದಾರೆ.

click me!