2008ರ ಮೊದಲ ಐಪಿಎಲ್ ಟೂರ್ನಿ ಭಾರತೀಯರನ್ನ ಮೋಡಿ ಮಾಡಿತ್ತು. ಪ್ರತಿ ವರ್ಷ ಅಭಿಮಾನಿಗಳು ಐಪಿಎಲ್‌ಗಾಗಿ ಕಾದು ಕುಳಿತುಕೊಳ್ಳುವಂತೆ ಮಾಡಿತು. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನ ರಂಜಿಸಿದ ಕ್ರಿಕೆಟಿಗರು ಯಾರು? ಇಲ್ಲಿದೆ ಲಿಸ್ಟ್.
ಬೆಂಗಳೂರು(ಡಿ.24): ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿ ಈಗಾಗಲೇ 11 ಆವೃತ್ತಿಗಳನ್ನ ಪೂರೈಸಿ, ಇದೀಗ 12ನೇ ಆವೃತ್ತಿಗೆ ಸಜ್ಜಾಗುತ್ತಿದೆ. ಮುಂಬರುವ ಐಪಿಎಲ್ ಟೂರ್ನಿಗಾಗಿ ಈಗಾಗಲೇ ಆಟಗಾರರ ಹರಜು ಕೂಡ ನಡೆದಿದೆ. ಇದೇ ವೇಲೆ 2008ರ ಮೊದಲ ಐಪಿಎಲ್ ಆವೃತ್ತಿಯನ್ನು ಯಾರು ಮರೆತಿಲ್ಲ.
ಇದನ್ನೂ ಓದಿ: 25 ಲಕ್ಷ ಉಳಿಸಲು ಹೋಗಿ ಕೈ ಸುಟ್ಟುಕೊಂಡ RCB!
ಚೊಚ್ಚಲ ಐಪಿಎಲ್ ಆವೃತ್ತಿ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಬ್ರೆಂಡನ್ ಮೆಕ್ಕಲಂ ಸಿಡಿಸಿದ ಭರ್ಜರಿ ಶತಕ, ಪ್ರಶಸ್ತಿ ಗೆದ್ದ ರಾಜಸ್ಥಾನ ರಾಯಲ್ಸ್ ..ಹೀಗೆ ಒಂದಲ್ಲಾ ಒಂದು ನೆನಪುಗಳು ಕ್ರಿಕೆಟಿಗರನ್ನ ಕಾಡುತ್ತಲೇ ಇದೆ. ಇದೇ ಟೂರ್ನಿಯಲ್ಲಿ ತಂಡದ ಪರ ಗರಿಷ್ಠ ಸಿಕ್ಸರ್ ಸಿಡಿಸಿದ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.
ಇದನ್ನೂ ಓದಿ: ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!
ಕ್ರಿಕೆಟರ್: ಸನತ್ ಜಯಸೂರ್ಯ
ತಂಡ: ಮುಂಬೈ ಇಂಡಿಯನ್ಸ್
ಸಿಕ್ಸರ್: 31
ಕ್ರಿಕೆಟರ್: ಶಾನ್ ಮಾರ್ಶ್
ತಂಡ: ಕಿಂಗ್ಸ್ ಇಲೆವೆನ್ ಪಂಜಾಬ್
ಸಿಕ್ಸರ್: 26
ಕ್ರಿಕೆಟರ್: ಯುಸುಫ್ ಪಠಾಣ್
ತಂಡ: ರಾಜಸ್ಥಾನ ರಾಯಲ್ಸ್
ಸಿಕ್ಸರ್: 25
ಕ್ರಿಕೆಟರ್: ವಿರೇಂದ್ರ ಸೆಹ್ವಾಗ್
ತಂಡ: ಡೆಲ್ಲಿ ಡೇರ್‌ಡೆವಿಲ್ಸ್
ಸಿಕ್ಸರ್: 21
ಕ್ರಿಕೆಟರ್: ಆ್ಯಡಮ್ ಗಿಲ್‌ಕ್ರಿಸ್ಟ್
ತಂಡ: ಡೆಕ್ಕನ್ ಚಾರ್ಜಸ್
ಸಿಕ್ಸರ್: 19