
ಮುಂಬೈ[ಏ.19]: ಕರ್ನಾಟಕದ ಯುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಶೈಲಿ ಕುರಿತು ಆಸ್ಪ್ರೇಲಿಯಾದ ದಿಗ್ಗಜ ವೇಗಿ ಬ್ರೆಟ್ ಲೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಲೀ, ‘ಭಾರತೀಯ ವೇಗಿಗಳ ಪ್ರದರ್ಶನ ಬಹಳ ಖುಷಿ ನೀಡಿದೆ. ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲ್ ಮಾಡಬಲ್ಲ ಪ್ರಸಿದ್ಧ್ ಉತ್ತಮ ಬೌಲಿಂಗ್ ಶೈಲಿ ಹೊಂದಿದ್ದಾರೆ. ತಮ್ಮ ಓಟದ ವೇಗದಲ್ಲಿ ಮತ್ತಷ್ಟು ಸುಧಾರಣೆ ಕಂಡರೆ ಸ್ಥಿರ ಪ್ರದರ್ಶನ ತೋರಬಹುದು. ವೇಗದ ಬೌಲರ್ ಆಗಲು ಇಚ್ಛಿಸುವವರು ಉತ್ತಮ ಅಥ್ಲೀಟ್ ಆಗಿರಬೇಕು. ಪ್ರಸಿದ್ಧ್ ಭಾರತದ ಭವಿಷ್ಯದ ತಾರೆಯಾಗಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದಿದ್ದಾರೆ.
IPL 2019: ಇಲ್ಲಿದೆ KKR ವಿರುದ್ದದ ಪಂದ್ಯಕ್ಕೆ RCB ಸಂಭಾವ್ಯ ತಂಡ!
ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಬ್ರೆಟ್ ಲೀ ಕೂಡಾ ಒಬ್ಬರೆನಿಸಿದ್ದಾರೆ. ಲೀ ಆಸ್ಟ್ರೇಲಿಯಾ ಪರ 76 ಟೆಸ್ಟ್ ಹಾಗೂ 221 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 310 ಮತ್ತು 380 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.