ವಾರಾಂತ್ಯದಲ್ಲಿಂದು ’ಕಿಂಗ್ಸ್’ಗಳ ಕದನ

Published : Apr 06, 2019, 11:56 AM IST
ವಾರಾಂತ್ಯದಲ್ಲಿಂದು ’ಕಿಂಗ್ಸ್’ಗಳ ಕದನ

ಸಾರಾಂಶ

ವಾರಾಂತ್ಯದಲ್ಲಿಂದು ಧೋನಿ ಹಾಗೂ ಅಶ್ವಿನ್‌ರ ನಾಯಕತ್ವ ಶೈಲಿಗಳ ನಡುವಿನ ಸಮರವಿದು ಎಂದೇ ಬಿಂಬಿಸಲಾಗಿದ್ದು, ಅಗ್ರಸ್ಥಾನದ ಮೇಲೆ ಧೋನಿ ಪಡೆ ಕಣ್ಣಿಟ್ಟಿದೆ.

ಚೆನ್ನೈ[ಏ.06]: ಚೆನ್ನೈ ಕ್ರಿಕೆಟ್‌ ಅಭಿಮಾನಿಗಳಿಗೆ ಶನಿವಾರ, ತಮ್ಮೂರಿನ ಸೂಪರ್‌ ಕಿಂಗ್ಸ್‌ ತಂಡವನ್ನು ಬೆಂಬಲಿಸಬೇಕೋ ಇಲ್ಲವೇ ತಮ್ಮರಿನ ತಾರಾ ಆಟಗಾರನಾದ ಆರ್‌.ಅಶ್ವಿನ್‌ ನೇತೃತ್ವದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಬೆಂಬಲಿಸಬೇಕೋ ಎನ್ನುವ ಗೊಂದಲ ಎದುರಾಗಲಿದೆ. 

ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಧೋನಿ ಹಾಗೂ ಅಶ್ವಿನ್‌ರ ನಾಯಕತ್ವ ಶೈಲಿಗಳ ನಡುವಿನ ಸಮರವಿದು ಎಂದೇ ಬಿಂಬಿಸಲಾಗಿದೆ. ಎಂತದ್ದೇ ಪರಿಸ್ಥಿತಿಯಲ್ಲಿ ತಾಳ್ಮೆ ಉಳಿಸಿಕೊಂಡು ಪಂದ್ಯವನ್ನು ಗೆಲ್ಲಲು ದಾರಿ ಹುಡುಕುವ ಧೋನಿ ಒಂದು ಕಡೆಯಾದರೆ, ಆಕ್ರಮಣಕಾರಿ ಗುಣದ ಜತೆ ಗೆಲ್ಲಲು ನಿರೀಕ್ಷೆ ಮಾಡದಂತಹ ದಾರಿಗಳನ್ನು ಹುಡುಕುವ ಅಶ್ವಿನ್‌ ಮತ್ತೊಂದು ಕಡೆ. ಇಬ್ಬರ ನೇತೃತ್ವದ ತಂಡಗಳ ನಡುವಿನ ಪೈಪೋಟಿ ನಿರೀಕ್ಷೆ ಹೆಚ್ಚಿಸಿದೆ.

ಪಿಚ್‌ ರಿಪೋರ್ಟ್‌

ಚೆಪಾಕ್‌ ಪಿಚ್‌ ಸ್ಪಿನ್‌ ಸ್ನೇಹಿಯಾಗಿದು, ಉಭಯ ತಂಡಗಳು ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಇದೆ. ಬ್ಯಾಟ್ಸ್‌ಮನ್‌ಗಳು ಕಾದು ಆಡಿದರೆ ಚೆಂಡು ಬ್ಯಾಟ್‌ಗೆ ಸಲೀಸಾಗಿ ಸಿಗಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ಹೆಚ್ಚು ಮೊತ್ತ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.

ಒಟ್ಟು ಮುಖಾಮುಖಿ: 19

ಚೆನ್ನೈ: 11

ಪಂಜಾಬ್‌: 08

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಅಂಬಟಿ ರಾಯುಡು, ಶೇನ್‌ ವಾಟ್ಸನ್‌, ಸುರೇಶ್‌ ರೈನಾ, ಎಂ.ಎಸ್‌.ಧೋನಿ (ನಾಯಕ), ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೋ, ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಶರ್ಮಾ, ಇಮ್ರಾನ್‌ ತಾಹಿರ್‌.

ಪಂಜಾಬ್‌: ಕ್ರಿಸ್‌ ಗೇಲ್‌, ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಡೇವಿಡ್‌ ಮಿಲ್ಲರ್‌, ಸ್ಯಾಮ್‌ ಕರ್ರನ್‌, ಸರ್ಫರಾಜ್‌ ಖಾನ್‌, ಆರ್‌.ಅಶ್ವಿನ್‌ (ನಾಯಕ), ಎಂ.ಅಶ್ವಿನ್‌, ವರುಣ್‌ ಚಕ್ರವರ್ತಿ, ಆ್ಯಂಡ್ರೂ ಟೈ, ಮೊಹಮದ್‌ ಶಮಿ.

ಸ್ಥಳ: ಚೆನ್ನೈ, ಪಂದ್ಯ ಆರಂಭ: ಸಂಜೆ 4ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?