ಕೊಹ್ಲಿಯನ್ನು ಪ್ರಶ್ನೆ ಮಾಡಿದ ಆ್ಯಂಡರ್ಸನ್ ಮೇಲೆ ಸಿಟ್ಟಾದ ಇಂಜಮಾಮ್ : ಭಾರತದ ಮತ್ತೊಬ್ಬ ಸ್ಫೋಟಕ ಆಟಗಾರನನನ್ನು ಕಂಡು ಇವರಿಗೆ ಭಯವಾಗಿತಂತೆ

Published : Dec 13, 2016, 11:19 AM ISTUpdated : Apr 11, 2018, 01:05 PM IST
ಕೊಹ್ಲಿಯನ್ನು ಪ್ರಶ್ನೆ ಮಾಡಿದ ಆ್ಯಂಡರ್ಸನ್ ಮೇಲೆ ಸಿಟ್ಟಾದ  ಇಂಜಮಾಮ್ : ಭಾರತದ ಮತ್ತೊಬ್ಬ ಸ್ಫೋಟಕ ಆಟಗಾರನನನ್ನು ಕಂಡು ಇವರಿಗೆ ಭಯವಾಗಿತಂತೆ

ಸಾರಾಂಶ

ಕೋಹ್ಲಿಯನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ.

ಕೊಹ್ಲಿಯ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಪ್ರಶ್ನೆ ಮಾಡಿದ್ದ ಇಂಗ್ಲೆಂಡ್ ಆಟಗಾರ  ಜೇಮ್ಸ್ ಆ್ಯಂಡರ್ಸನ್ ಮೇಲೆ ಪಾಕಿಸ್ತಾನದ ಮಾಜಿ ದೈತ್ಯ ಆಟಗಾರ ಇಂಜಮಾಮ್ ಉಲ್ ಹಕ್ ಸಿಟ್ಟಾಗಿದ್ದಾರೆ.

ಜೇಮ್ಸ್ ಆ್ಯಂಡರ್ಸನ್ ಅವರು ಕೋಹ್ಲಿ ಬ್ಯಾಟಿಂಗ್ ತಂತ್ರಗಾರಿಕೆಯನ್ನು ಪ್ರಶ್ನೆ ಮಾಡಿರುವುದರಿಂದ  ನನಗೆ ನಿಜವಾಗಿಯೂ ಆಶ್ಚರ್ಯವಾಗಿದೆ. ಇಂಗ್ಲೆಂಡ್' ನೆಲದಲ್ಲಿ ಅತ್ಯುತ್ತಮವಾಗಿ ಆಟವಾಡಿದರೆ ಮಾತ್ರ  ಅವರನ್ನು ಉತ್ತಮ ಆಟಗಾರ ಎನ್ನಲಾದೀತೆ.  ಉಪ ಖಂಡದಲ್ಲಿ ವಿಫಲರಾಗುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನು ಕಳಪೆ ಆಟಗಾರರು ಅಥವಾ ದುರ್ಬಲ ತಂಡ ಎನ್ನಲಾಗುತ್ತದೆಯೇ' ಎಂದಿದ್ದಾರೆ

ಕೋಹ್ಲಿಯನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಇವರೊಬ್ಬ ಅತ್ಯುತ್ತಮ ಗುಣಮಟ್ಟದ ಆಟಗಾರ. ತನ್ನ ತಂಡವನ್ನು ಗೆಲ್ಲಿಸಲು ರನ್'ಗಳ ಹೊಳೆಯನ್ನೆ ಹರಿಸುತ್ತಾರೆ.ರನ್'ಗಳ ಹಸಿವನ್ನು ನೀಗಿಸುವ ಆಟಗಾರ ಅವರು  ಎಂದು ಜಿಯೋ ಸೂಪರ್ ಸ್ಪೋರ್ಟ್ ಚಾನೆಲ್'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ

ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕಳೆಪೆ ಪ್ರದರ್ಶನವನ್ನು ತೋರುತ್ತಿವೆ ಇದಕ್ಕೆ ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಮೇಲೆ ಸರಣಿ ಸೋತಾಗಲೇ ಅದು ಸಾಬೀತಾಗಿದೆ.

ಸೆಹ್ವಾಗ್ ಆಟ ನೋಡಿ ನನಗೆ ಭಯವಾಗಿತ್ತು.

ವೀರೇಂದ್ರ ಸೆಹ್ವಾಗ್ ಒಬ್ಬ ಅದ್ಭುತ ಬ್ಯಾಟ್ಸಮೆನ್ ಹಾಗೂ ಆಕ್ರಮಣಕಾರಿ ಆಟಗಾರ.ಈತ ಟೆಸ್ಟ್ ಅಥವಾ ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯದಲ್ಲಿ 80 ರನ್ ಗಳಿಸಿದರೆ ತಂಡದ ಮೊತ್ತ 300ರ ಗಡಿ ದಾಟುವುದು ಖಚಿತ. ಇವರು ಆಟವಾಡಲು ನಿಂತರೆ ಬೌಲರ್'ಗಳ ನಿಜಕ್ಕೂ ಭಯವಾಗುತ್ತಿತ್ತು. ನನಗೂ ಆಟಕ್ಕೆ ನಿಂತಾಗ ಎಷ್ಟೋ ಬಾರಿ ಭಯಪಟ್ಟಿದುಂಟು. ಭಾರತ-ಪಾಕ್ ಪಂದ್ಯಗಳಲ್ಲಿ ವೈಯುಕ್ತಿಕವಾಗಿ ನಾನು ಸ್ಪರ್ಧೆ ನಡೆಯುವುದನ್ನು ಇಷ್ಟ ಪಡುತ್ತೇನೆ' ಎಂದು ದೈತ್ಯ ಆಟಗಾರ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?