
ಲೌಡರ್‌ಹಿಲ್(ಆ.03): ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸೋಲಿನಿಂದ ನಿರಾಸೆಗೊಂಡಿದ್ದ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬೌಲರ್‌ಗಳ ಪರಾಕ್ರಮದಿಂದ ಭಾರತ ಗೆಲುವಿನ ನಗೆ ಬೀರಿತು. ಆದರೆ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಸಮಸ್ಯೆ ಮತ್ತೆ ತಲೆದೋರಿದೆ.
ಇದನ್ನೂ ಓದಿ: ಭಾರತ ಕೋಚ್ ಆಗುವ ಆಸೆ ಇದೆ: ಗಂಗೂಲಿ!
ಗೆಲುವಿಗೆ 96 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ಧವನ್ ಕೇವಲ 1 ರನ್ ಸಿಡಿಸಿ ಔಟಾದರು. ಆದರೆ ರೋಹಿತ್ ಸಿಡಿಸಿದ 24 ರನ್ ನೆರವಿನಿಂದ ಟೀಂ ಇಂಡಿಯಾ ಉಸಿರಾಡಿತು. ಧೋನಿ ಸ್ಥಾನ ತುಂಬಲ್ಲ ಆಟಾಗರ ಎನಿಸಿಕೊಂಡಿದ್ದ ರಿಷಬ್ ಪಂತ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ ಪಂತ್ ಮೇಲಿನ ಭರವಸೆ ಹುಸಿಯಾಯಿತು.
ಇದನ್ನೂ ಓದಿ: ನಾನು ದೇಶಕ್ಕಾಗಿ ಆಡುತ್ತೇನೆಯೇ ಹೊರತು, ತಂಡಕ್ಕಾಗಿ ಅಲ್ಲ': ರೋಹಿತ್ ಮಾತಿನ ಮರ್ಮವೇನು..?
ಕನ್ನಡಿಗ ಮನೀಶ್ ಪಾಂಡೆ 19 ರನ್ ಸಿಡಿಸಿ ಸಿಕ್ಸರ್ ಹೊಡೆತ ಕೈಹಾಕಿದರು. ಆದರೆ ಕ್ಲೀನ್ ಬೋಲ್ಡ್ ಆಗೋ ಮೂಲಕ ಪಾಂಡೆಯ ಸ್ಥಾನ ಕೂಡ ಅಲುಗಾಡ ತೊಡಗಿದೆ. ಪಾಂಡೆ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ 19 ರನ್ ಸಿಡಿಸಿ ನಿರ್ಗಮಿಸಿದರು. ಸುಲಭ ಟಾರ್ಗೆಟ್ ಕೂಡ ಟೀಂ ಇಂಡಿಯಾಗೆ ಕಷ್ಟವಾಗತೊಡಗಿತು. ಭರವಸೆಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು.
ಕ್ರುನಾಲ್ ಪಾಂಡ್ಯ 12 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಅಜೇಯ 10 ರನ್ ಸಿಡಿಸಿದರೆ, ವಾಶಿಂಗ್ಟನ್ ಸುಂದರ್ ಸಿಡಿಸಿದ ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ 17.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.