ಹಾಕಿ: ಭಾರತಕ್ಕೆ ಏಷ್ಯಾ ಕಪ್ ಗೆಲುವು; 2018ರ ವಿಶ್ವಕಪ್'ಗೆ ಅರ್ಹತೆ ಪಡೆದ ಮಹಿಳೆಯರು

By Suvarna Web DeskFirst Published Nov 5, 2017, 5:30 PM IST
Highlights

* ಜಪಾನ್'ನ ಕಾಕಮಿಗಹಾರಾ ನಗರದಲ್ಲಿ ನಡೆದ ಏಷ್ಯಾ ಕಪ್ ಹಾಕಿ ಟೂರ್ನಿ

* ಫೈನಲ್'ನಲ್ಲಿ ಚೀನಾ ವಿರುದ್ಧ ಭಾರತೀಯರಿಗೆ 5-4ಗೋಲುಗಳಿಂದ ಗೆಲುವು

* ಎರಡನೇ ಬಾರಿ ಏಷ್ಯಾ ಕಪ್ ಜಯಿಸಿದ ಭಾರತದ ಮಹಿಳೆಯರು

* 2018ರ ಮಹಿಳಾ ಹಾಕಿ ವಿಶ್ವಕಪ್'ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ

ನವದೆಹಲಿ(ನ. 05): ಭಾರತ ಮಹಿಳಾ ಹಾಕಿ ತಂಡ ಏಷ್ಯಾ ಕಪ್ ಟೂರ್ನಿ ಜಯಿಸಿದೆ. ಜಪಾನ್'ನ ಕಾಕಮಿಗಹಾರಾ ನಗರದಲ್ಲಿ ನಡೆದ ಫೈನಲ್'ನಲ್ಲಿ ಚೀನಾ ವಿರುದ್ಧ ಶೂಟೌಟ್'ನಲ್ಲಿ 5-4 ಗೋಲುಗಳಿಂದ ಭಾರತದ ವನಿತೆಯರು ರೋಚಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2018ರ ಹಾಕಿ ವಿಶ್ವಕಪ್'ಗೆ ಟೀಮ್ ಇಂಡಿಯಾ ಕ್ವಾಲಿಫೈ ಆಗಿದೆ.

ಭಾರತ ಮತ್ತು ಚೀನಾ ನಡುವಿನ ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ನವಜೋತ್ ಕೌರ್ 25ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, 47ನೇ ನಿಮಿಷದಲ್ಲಿ ಚೀನಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿತು.. ಪಂದ್ಯದ ಪೂರ್ಣಾವಧಿಯಲ್ಲಿ ಎರಡೂ ತಂಡಗಳು 1-1 ಸಮಬಲ ಸಾಧಿಸಿದ್ದವು. ಆನಂತರ ನಡೆಸಲಾದ ಶೂಟೌಟ್'ನಲ್ಲೂ 4-4 ಸಮಬಲ ಸಾಧಿಸಿದವು. ಸಡನ್ ಡೆತ್'ನಲ್ಲಿ ಭಾರತ ಮೇಲುಗೈ ಸಾಧಿಸಿ 5-4ರಿಂದ ಪಂದ್ಯ ಗೆದ್ದು ಚಾಂಪಿಯನ್ ಎನಿಸಿತು.

ಭಾರತವು ಏಷ್ಯಾ ಕಪ್ ಗೆಲ್ಲುತ್ತಿರುವುದು ಇದು ಎರಡನೇ ಬಾರಿ. 13 ವರ್ಷಗಳ ಹಿಂದೆ ಭಾರತವು ಏಷ್ಯಾ ಕಪ್ ಗೆದ್ದಿತ್ತು. 2009ರಲ್ಲಿ ಫೈನಲ್'ನಲ್ಲಿ ಚೀನಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಈಗ ಸೇಡು ತೀರಿಸಿಕೊಂಡಿದೆ.

click me!