ಬೆಲ್ಜಿಯಂ ಪುರುಷರ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತ ವನಿತೆಯರ ತಂಡ

Published : Sep 19, 2017, 05:34 PM ISTUpdated : Apr 11, 2018, 01:05 PM IST
ಬೆಲ್ಜಿಯಂ ಪುರುಷರ ತಂಡಕ್ಕೆ ಮಣ್ಣುಮುಕ್ಕಿಸಿದ ಭಾರತ ವನಿತೆಯರ ತಂಡ

ಸಾರಾಂಶ

ಮೂರನೇ ಕ್ವಾರ್ಟರ್'ನ ಆರಂಭದಲ್ಲಿ ವನಿತೆಯರ ಭಾರತ ತಂಡ 4-0 ಮುನ್ನಡೆ ಪಡೆಯಿತು.

ಆ್ಯಂಟ್ವೆರ್ಪ್(ಸೆ.19): ಡಿಫೆಂಡರ್ ಗುರ್ಜಿತ್ ಕೌರ್ ಮತ್ತು ನಾಯಕಿ ರಾಣಿ ರಾಂಪಾಲ್ ಅವರ ಪ್ರಭಾವಿ ಆಟದ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ, ಯುರೋಪ್ ಪ್ರವಾಸದ ಕೊನೆಯ ಪಂದ್ಯದಲ್ಲಿ ಬೆಲ್ಜಿಯಂ ಕಿರಿಯ ಪುರುಷರ ವಿರುದ್ಧ 4-3 ಗೋಲುಗಳಿಂದ ಗೆಲುವು ಸಾಧಿಸಿದೆ.

ಇಲ್ಲಿನ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಗುರ್ಜಿತ್ ಕೌರ್ 7, 11ನೇ ನಿಮಿಷ, ರಾಣಿ 13, 33ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಬೆಲ್ಜಿಯಂ ತಂಡದ ಪರ ಟಿಬಾಲ್ಟ್ ನೆವೆನ್ 38ನೇ ನಿಮಿಷದಲ್ಲಿ, ವಿಲಿಯಂ ವಾನ್ 42ನೇ ನಿಮಿಷ, ಮಥಾಯಿಸ್ ರೆಲಿಕ್ 48ನೇ ನಿಮಿಷದಲ್ಲಿ ಗೋಲುಗಳಿಸಿದರು.

ಮೂರನೇ ಕ್ವಾರ್ಟರ್'ನ ಆರಂಭದಲ್ಲಿ ವನಿತೆಯರ ಭಾರತ ತಂಡ 4-0 ಮುನ್ನಡೆ ಪಡೆಯಿತು. ಮೂರನೇ ಕ್ವಾರ್ಟರ್'ನ 5ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಟಿಬಾಲ್ಟ್ ನೆವೆನ್ ಪೆನಾಲ್ಟಿ ಕಾರ್ನರ್‌'ನಲ್ಲಿ ಗೋಲುಗಳಿಸಿ 1-4 ರಿಂದ ಖಾತೆ ತೆರೆದರು. ಇದಾದ 4ನೇ ನಿಮಿಷದಲ್ಲಿ ವಿಲಿಯಂ ವಾನ್ ಫೀಲ್ಡ್ ಗೋಲು ಬಾರಿಸಿ 2-4 ರಿಂದ ಹಿನ್ನಡೆಯನ್ನು ತಗ್ಗಿಸಿದರು. ಬಳಿಕ 4ನೇ ಕ್ವಾರ್ಟರ್‌'ನ 3ನೇ ನಿಮಿಷದಲ್ಲಿ ಮಥಾಯಿಸ್ ಪೆನಾಲ್ಟಿ ಕಾರ್ನರ್‌'ನಲ್ಲಿ ಗೋಲುಗಳಿಸಿ 3-4 ರಿಂದ ಅಂತರ ಕಡಿಮೆ ಮಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!
Exclusive Interview: ಜೀವನದ ದಿಕ್ಕೇ ಬದಲಿಸಿ 'ಮಿಸ್​ ಯೂನಿವರ್ಸ್​ ಕರ್ನಾಟಕ' ಪಟ್ಟ ಕೊಟ್ಟ ಆ ಗಾಯ