ಬಿಲ್ಲುಗಾರಿಕೆ: ಭಾರತೀಯ ಪುರುಷರ ತಂಡ ವಿಶ್ವಚಾಂಪಿಯನ್ಸ್

By Suvarna Web DeskFirst Published May 20, 2017, 11:45 AM IST
Highlights

ಬಿಲ್ಲುಗಾರಿಕೆ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ವೆಣ್ಣಂ ಅವರಿರುವ ತಂಡವು ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದೆ. ಇನ್ನುಳಿದಂತೆ, ಉಳಿದ ಭಾರತೀಯ ಬಿಲ್ಲುಗಾರಿಕೆಪಟುಗಳು ವಿಶ್ವಕಪ್'ನಲ್ಲಿ ನಿರಾಶೆಯ ಪ್ರದರ್ಶನ ನೀಡಿದ್ದಾರೆ.

ಶಾಂಘೈ(ಮೇ 20): ಭಾರತದ ಪುರುಷರ ಬಿಲ್ಲುಗಾರಿಕೆ ತಂಡವು ಆರ್ಚರಿ ವಿಶ್ವಕಪ್'ನಲ್ಲಿ ಚಿನ್ನ ಜಯಿಸಿದೆ. ಶನಿವಾರ ನಡೆದ ಪುರುಷರ ಟೀಮ್ ಫೈನಲ್'ನಲ್ಲಿ ಕೊಲಂಬಿಯಾ ವಿರುದ್ಧ ಭಾರತ ತಂಡ 5 ಅಂಕಗಳ ಅಂತರದಿಂದ ರೋಚಕ ಗೆಲುವು ಸಾಧಿಸಿತು. ಅಭಿಷೇಕ್ ವರ್ಮಾ, ಚಿನ್ನರಾಜು ಶ್ರೀಧರ್ ಮತ್ತು ಅಮನ್'ಜೀತ್ ಸಿಂಗ್ ಅವರಿದ್ದ ಭಾರತ ತಂಡವು ಎದುರಾಳಿಗಳಿಂದ 226-221 ಅಂಕಗಳಿಂದ ಸದೆಬಡಿದರು.

ಇದೇ ವೇಳೆ, ಬಿಲ್ಲುಗಾರಿಕೆ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ವೆಣ್ಣಂ ಅವರಿರುವ ತಂಡವು ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದೆ. ಇನ್ನುಳಿದಂತೆ, ಉಳಿದ ಭಾರತೀಯ ಬಿಲ್ಲುಗಾರಿಕೆಪಟುಗಳು ವಿಶ್ವಕಪ್'ನಲ್ಲಿ ನಿರಾಶೆಯ ಪ್ರದರ್ಶನ ನೀಡಿದ್ದಾರೆ.

ಸ್ಟಾರ್ ಆಟಗಾರರಾದ ಅತಾನು ದಾಸ್ ಮತ್ತು ದೀಪಿಕಾ ಕುಮಾರಿ ಅವರು ವೈಯಕ್ತಿಕ ರಿಕರ್ವ್ ವಿಭಾಗ ಮತ್ತು ಮಿಶ್ರ ರಿಕರ್ವ್ ಟೀಮ್ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ನಿರೀಕ್ಷೆಗೂ ಮುನ್ನವೇ ಔಟಾಗಿದ್ದಾರೆ.

click me!