ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಓಡಲು ರೆಡಿಯಾದ ದ್ಯುತಿ ಚಾಂದ್‌

By Web Desk  |  First Published Sep 13, 2019, 12:04 PM IST

ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂಚ್ ವಿಶ್ವ ಅಥ್ಲೆ​ಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ರೆಡಿಯಾಗಿಯಾಗಿದ್ದಾರೆ. ಅಂತಾ​ರಾ​ಷ್ಟ್ರೀಯ ಅಥ್ಲೆ​ಟಿಕ್ಸ್‌ ಫೆಡ​ರೇ​ಷನ್‌ ಆಹ್ವಾನದ ಮೇರೆಗೆ ದ್ಯುತಿ ಚಾಂದ್ ಭಾಗವಹಿಸಲು ರೆಡಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವ​ದೆ​ಹ​ಲಿ(ಸೆ.13): ದೋಹಾ ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ದ್ಯುತಿ ಚಾಂದ್‌ ಸ್ಪರ್ಧಿ​ಸ​ಲಿ​ದ್ದಾರೆ. ಸೆ.27ರಿಂದ ಅ.6ರ ತನಕ ದೋಹಾ​ ವಿಶ್ವ ಚಾಂಪಿ​ಯ​ನ್‌​ಶಿ​ಪ್‌ ನಡೆ​ಯ​ಲಿದ್ದು, ದ್ಯುತಿ ಭಾರತ ತಂಡ ಸೇರಿ​ಕೊಂಡಿ​ದ್ದಾರೆ. 

ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

Latest Videos

undefined

ವಿಶ್ವ ಯೂನಿ​ವ​ರ್ಸಿಟಿ ಗೇಮ್ಸ್‌ನ 100 ಮೀ. ಚಾಂಪಿ​ಯನ್‌ ದ್ಯುತಿರನ್ನು ದೋಹಾ ವಿಶ್ವ ಅಥ್ಲೆ​ಟಿಕ್ಸ್‌ನಲ್ಲಿ ಸ್ಪರ್ಧಿ​ಸು​ವಂತೆ ಅಂತಾ​ರಾ​ಷ್ಟ್ರೀಯ ಅಥ್ಲೆ​ಟಿಕ್ಸ್‌ ಫೆಡ​ರೇ​ಷನ್‌ (ಐಎ​ಎ​ಎ​ಫ್‌) ಆಹ್ವಾ​ನಿ​ಸಿ​ತ್ತು. ಸೆಪ್ಟೆಂಬರ್ 09ರಂದು ಭಾರತೀಯ ಅಥ್ಲೇಟಿಕ್ಸ್ ಸಂಸ್ಥೆ ದೋಹಾದಲ್ಲಿ ನಡೆಯಲಿರುವ ಕೂಟಕ್ಕೆ 25 ಭಾರತೀಯ ಆಟಗಾರರ ಹೆಸರನ್ನು ಅಂತಿಮಗೊಳಿಸಿತ್ತು. 

ನನ್ನ ಬಯೋಪಿಕ್‌ನಲ್ಲಿ ಕಂಗನಾ ನಟಿಸಲಿ: ದ್ಯುತಿ ಚಾಂದ್‌

ವಿಶ್ವ ಅಥ್ಲೆ​ಟಿಕ್ಸ್‌ ಅರ್ಹತೆ ಸಂಪಾ​ದಿ​ಸು​ವಲ್ಲಿ ದ್ಯುತಿ ವಿಫ​ಲ​ವಾ​ಗಿ​ದ್ದರೂ ದೋಹಾ​ದಲ್ಲಿ ಭಾರ​ತ​ವನ್ನು ಪ್ರತಿ​ನಿ​ಧಿ​ಸ​ಲಿ​ದ್ದಾ​ರೆ. ದ್ಯುತಿ ಅರ್ಹತೆಗಿಟ್ಟಿಸಿಕೊಳ್ಳಲು 11.24 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಬೇಕಿತ್ತು. ಆದರೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. 
 

click me!