
ಪ್ಯಾರಿಸ್(ಸೆ.13): ಏಳು ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್ ಮೈಕಲ್ ಶುಮಾಕರ್ ಕೋಶ ಚಿಕಿತ್ಸೆ ಬಳಿಕ ಪ್ರಜ್ಞೆಗೆ ಮರಳಿದ್ದಾರೆ. ಇಲ್ಲಿನ ಆಸ್ಪತ್ರೆಯೊಂದಕ್ಕೆ ಸೋಮವಾರ ಶುಮಾಕರ್ರನ್ನು ದಾಖಲಿಸಿದ್ದು, ಕೋಶ ಚಿಕಿತ್ಸೆ (ಸ್ಟೆಮ್ ಸೆಲ್ ಥೆರಪಿ)ಯನ್ನು ನೀಡಲಾಗಿತ್ತು.
F3ರೇಸ್‌ನಲ್ಲಿ ಭೀಕರ ಅಪಘಾತ; ಚಿಕಿತ್ಸೆಗೆ ನಡೆದುಕೊಂಡು ತೆರಳಿದ ಚಾಲಕ!
2013ರಲ್ಲಿ ಸ್ಕೈಯಿಂಗ್ ನಡೆಸುತ್ತಿದ್ದ ವೇಳೆ ಆದ ಅಪಘಾತದಲ್ಲಿ ಶುಮಾಕರ್ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. 6 ತಿಂಗಳ ಬಳಿಕ 2014ರಲ್ಲಿ ಶುಮಾಕರ್ ಕೋಮಾದಿಂದ ಹೊರಬಂದಿದ್ದರು. ಕೋಮಾದಿಂದ ಹೊರಬಂದಿದ್ದರೂ ಮೈಕಲ್ಗೆ ಮನೆಯಲ್ಲಿ ರಹಸ್ಯವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ವಿಜರ್‌ಲೆಂಡ್‌ನ ಲುಸ್ನಾನ್ನೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸೆಪ್ಟೆಂಬರ್ 2014ರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಮೈಕಲ್ ಶುಮಾಕರ್ ಕೋಶ ಚಿಕಿತ್ಸೆಗಾಗಿ ಪ್ಯಾರಿಸ್’ನ ಆಸ್ಫತ್ರೆ ಸೇರಿದ್ದರು.
1.88 ಸೆಕೆಂಡ್‌ಗಳಲ್ಲಿ ಪಿಟ್ ಸ್ಟಾಪ್: F1ನಲ್ಲಿ ದಾಖಲೆ
1994-94ರಲ್ಲಿ 2 ಪ್ರಶಸ್ತಿ ಗೆದ್ದ ಶುಮಾಕರ್, 2000-04ರ ಅವಧಿಯಲ್ಲಿ ಫೆರಾರಿ ಜತೆ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇನ್ನು 2010ರಲ್ಲಿ ಶುಮಾಕರ್ ಮರ್ಸಿಡೆಸ್ ಜತೆ 3 ತಿಂಗಳ ಒಪ್ಪಂದ ಮಾಡಿಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.