ಸಿಂಧು ಹಾಗೂ ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಸಿಂಧು ಜಪಾನ್’ನ ಅಯಾ ಒಹೊರಿ ವಿರುದ್ಧ ಕಾದಾಡಲಿದ್ದಾರೆ. ಇನ್ನು ಕ್ವಾರ್ಟರ್’ಫೈನಲ್’ನಲ್ಲಿ ಒಲಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ವಿರುದ್ಧ ಕಾದಾಡುವ ಸಾಧ್ಯತೆಯಿದೆ. ಇನ್ನು ಶ್ರೀಕಾಂತ್ ವಿಶ್ವದ ಮಾಜಿ ಎರಡನೇ ಶ್ರೇಯಾಂಕಿತ ಡೆನ್ಮಾರ್ಕ್’ನ ಜಾನ್ ಓ ಜೋರ್ಗೆಸನ್ ವಿರುದ್ಧ ಸೆಣಸಲಿದ್ದಾರೆ.
ಕೌಲಾಲಂಪುರ[ಜೂ.26]: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕಿದಾಂಬಿ ಶ್ರೀಕಾಂತ್, ಇಲ್ಲಿ ಆರಂಭವಾಗಲಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಓಪನ್‌ನಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮತ್ತೊಬ್ಬ ತಾರಾ ಆಟಗಾರ ಎಚ್.ಎಸ್. ಪ್ರಣಯ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಸಿಂಧು ಹಾಗೂ ಶ್ರೀಕಾಂತ್‌ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಲಿದೆ. ಸಿಂಧು ಜಪಾನ್’ನ ಅಯಾ ಒಹೊರಿ ವಿರುದ್ಧ ಕಾದಾಡಲಿದ್ದಾರೆ. ಇನ್ನು ಕ್ವಾರ್ಟರ್’ಫೈನಲ್’ನಲ್ಲಿ ಒಲಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ವಿರುದ್ಧ ಕಾದಾಡುವ ಸಾಧ್ಯತೆಯಿದೆ. ಇನ್ನು ಶ್ರೀಕಾಂತ್ ವಿಶ್ವದ ಮಾಜಿ ಎರಡನೇ ಶ್ರೇಯಾಂಕಿತ ಡೆನ್ಮಾರ್ಕ್’ನ ಜಾನ್ ಓ ಜೋರ್ಗೆಸನ್ ವಿರುದ್ಧ ಸೆಣಸಲಿದ್ದಾರೆ.
ಆದರೆ ಸೈನಾಗೆ ಆರಂಭಿಕ ಸುತ್ತಿನಲ್ಲಿ ಸುಲಭ ಎದುರಾಳಿ ಸಿಕ್ಕಿದ್ದಾರೆ. ಉಳಿದಂತೆ ಬಿ.ಸಾಯಿ ಪಣೀತ್, ಸಮೀರ್ ವರ್ಮಾ ಸಹ ಕಣದಲ್ಲಿದ್ದಾರೆ.