
ನವದೆಹಲಿ(ಅ.20): ಇಂದು ಬಿಡುಗಡೆಗೊಂಡ ನೂತನ ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಪುಟ್ಬಾಲ್ ತಂಡ ತಾನು ಹಿಂದಿದ್ದ 148ನೇ ಸ್ಥಾನದಿಂದ 137ನೇ ಸ್ಥಾನಕ್ಕೆ ಜಿಗಿದಿದೆ.
ಇದು ಕಳೆದ ಆರು ವರ್ಷಗಳಲ್ಲಿ ಭಾರತ ತಂಡ ಗಳಿಸಿರುವ ಶ್ರೇಷ್ಠ ಶ್ರೇಯಾಂಕವಾಗಿದ್ದು, 2010ರ ಆಗಸ್ಟ್‌ನಲ್ಲಿಯೂ ಭಾರತವು 137ನೇ ಸ್ಥಾನ ಗಳಿಸಿತ್ತು.
ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಭಾರತ, 114ನೇ ಶ್ರೇಯಾಂಕಿತ ತಂಡವಾದ ಪೋರ್ಟೊ ರಿಕೊ ತಂಡವನ್ನು ಮಣಿಸಿತ್ತು. ಇದು ಒಮ್ಮೆಲೇ 230 ಅಂಕಗಳನ್ನು ಭಾರತದ ಮಡಿಲಿಗೆ ತಂದು ಹಾಕಿದ್ದರಿಂದಾಗಿ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಇಂಥ ಏರಿಕೆ ಕಾಣಲು ಕಾರಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.