
ಕಾಮನ್‌ವೆಲ್ತ್ ಗೇಮ್ಸ್ 2026(Commonwealth Games 2026)ರಲ್ಲಿ ಪುರುಷರ 90+ ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಬಾಕ್ಸರ್ ನರೇಂದರ್ ಬೆರ್ವಾಲ್(Narender Berwal), ಭಾನುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Prime minister Narendra Modi) ಅವರನ್ನು ಭೇಟಿಯಾದರು. ಈ ವೇಳೆ, ತಮ್ಮ ಬಾಕ್ಸಿಂಗ್ ವೃತ್ತಿಜೀವನದ ಒಂದು ಸ್ವಾರಸ್ಯಕರ ಕಥೆಯನ್ನು ಅವರು ಹಂಚಿಕೊಂಡರು. 2015ರ ವರ್ಲ್ಡ್ ಮಿಲಿಟರಿ ಗೇಮ್ಸ್‌ನಲ್ಲಿ ಪಾಕಿಸ್ತಾನಿ ಬಾಕ್ಸರ್ ಒಬ್ಬರನ್ನು ಸೋಲಿಸಿದ ನಂತರ ನಡೆದ ಸಂಭಾಷಣೆಯನ್ನು ಬೆರ್ವಾಲ್ ನೆನಪಿಸಿಕೊಂಡರು.
ಹಿಂದಿನ ಘಟನೆಯನ್ನು ನೆನಪಿಸಿಕೊಂಡ ಬೆರ್ವಾಲ್ 'ನನ್ನೊಂದಿಗೆ ಮಾತಾಡುವ ವೇಳೆ ಆ ಪಾಕಿಸ್ತಾನಿ ಬಾಕ್ಸರ್ ನಿಮ್ಮ ಹೆಸರು ನರೇಂದರ್, ನಿಮ್ಮ ಕೋಚ್ ಹೆಸರು ನರೇಂದರ್, ನಿಮ್ಮ ಪ್ರಧಾನಿ ಹೆಸರು ನರೇಂದ್ರ. ನನಗೆ ನರೇಂದ್ರ ಅನ್ನೋ ಹೆಸರನ್ನೇ ಕೇಳಿದ್ರೇ, ದ್ವೇಷ ಹುಟ್ಟುತ್ತೆ. ಆ ಹೆಸರು ಕೇಳಿದ್ರೆ ಆಗೋಲ್ಲ' ಅಂತಾ ಹೇಳಿದ್ದನೆಂದು ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೆರ್ವಾಲ್ ಈ ಮಾತನ್ನು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು. ದೇಶಕ್ಕೆ ಕೀರ್ತಿ ತಂದ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಎಲ್ಲರನ್ನೂ ಅಭಿನಂದಿಸಿದರು.
ಈ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಬಾಕ್ಸಿಂಗ್‌ನಲ್ಲಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದೆ. ಇದು ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ಬಾಕ್ಸಿಂಗ್ ಪ್ರದರ್ಶನವಾಗಿದೆ. ಈ ಹಿಂದೆ ಇಂಗ್ಲೆಂಡ್ (1934 ಮತ್ತು 2018) ಮತ್ತು ಕೆನಡಾ (1986) ಜಂಟಿಯಾಗಿ ನಿರ್ಮಿಸಿದ್ದ ಆರು ಚಿನ್ನದ ಪದಕಗಳ ದಾಖಲೆಯನ್ನು ಭಾರತ ಮುರಿದಿದೆ. ಗ್ಲಾಸ್ಗೋದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ (13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು) ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು.
11 ದಿನಗಳ ಸ್ಪರ್ಧೆಯ ನಂತರ ಗ್ಲಾಸ್ಗೋ ಗೇಮ್ಸ್ ಮುಕ್ತಾಯಗೊಂಡಿತು. ಸ್ಕಾಟ್ಲೆಂಡ್, ಕಾಮನ್‌ವೆಲ್ತ್ ಗೇಮ್ಸ್‌ನ ಧ್ವಜ ಮತ್ತು ಸೆರಿಮೋನಿಯಲ್ ಬ್ಯಾಟನ್ ಅನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಿತು. 2030ರಲ್ಲಿ ನಡೆಯಲಿರುವ ಐತಿಹಾಸಿಕ ನೂರನೇ ಆವೃತ್ತಿಯ ಈ ಕ್ರೀಡಾಕೂಟವನ್ನು ಭಾರತದ ಅಹಮದಾಬಾದ್ ಆಯೋಜಿಸಲಿದೆ. (ANI)
(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ವರದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.