ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ: ಶಿಖರ್ ಧವನ್ ಅರ್ಧ ಶತಕ

By Suvarna Web DeskFirst Published Mar 8, 2018, 10:45 PM IST
Highlights

ಶ್ರೀಲಂಕಾ ವಿರುದ್ಧ 90 ರನ್ ಬಾರಿಸಿ ವಿಜಯಕ್ಕೆ ಕಾರಣರಾಗಿದ್ದ ಶಿಖರ್ ಧವನ್ ಈ ಪಂದ್ಯದಲ್ಲೂ ಅರ್ಧ ಶತಕ(55: 43 ಎಸೆತ, 5 ಬೌಂಡರಿ, 2 ಸಿಕ್ಸ್'ರ್) ಬಾರಿಸಿ ಗೆಲುವಿನ ನಾಗಲೋಟಕ್ಕೆ ಕಾರಣರಾದರು.

ಕೊಲಂಬೊ(ಮಾ.08): ನಿದಹಾಸ್ ಟ್ರೋಫಿಯ ತ್ರಿಕೋನ ಸರಣಿಯ 2ನೇ ಟಿ20 ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಸುಲಭ ತುತ್ತಾಯಿತು. ಬಾಂಗ್ಲಾ ನೀಡಿದ 139 ರನ್'ಗಳ ಗುರಿಯನ್ನು ಭಾರತ ತಂಡ 18.4 ಓವರ್'ಗಳಲ್ಲಿ 141/4 ರನ್ ಪೇರಿಸಿ ಸಮಾಪ್ತಿಗೊಳಿಸಿತು.

ಶ್ರೀಲಂಕಾ ವಿರುದ್ಧ 90 ರನ್ ಬಾರಿಸಿ ವಿಜಯಕ್ಕೆ ಕಾರಣರಾಗಿದ್ದ ಶಿಖರ್ ಧವನ್ ಈ ಪಂದ್ಯದಲ್ಲೂ ಅರ್ಧ ಶತಕ(55: 43 ಎಸೆತ, 5 ಬೌಂಡರಿ, 2 ಸಿಕ್ಸ್'ರ್) ಬಾರಿಸಿ ಗೆಲುವಿನ ನಾಗಲೋಟಕ್ಕೆ ಕಾರಣರಾದರು. ರೈನಾ 28(27 ಎಸೆತ, 1 ಸಿಕ್ಸ್'ರ್, 1 ಬೌಂಡರಿ) ರನ್ ಪೇರಿಸಿದರೆ  ಕನ್ನಡಿಗ ಪಾಂಡೆ ಅಜೇಯರಾಗಿ 19 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 27 ರನ್ ಸಿಡಿಸಿ ಜಯದ ರುವಾರಿ ಎನಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬಾಂಗ್ಲಾಗೆ ಬ್ಯಾಟಿಂಗ್ ಆಹ್ವಾನಿಸಿದ ಟೀಂ ಇಂಡಿಯಾ ಉನಾದಕ್ಟ್ 38/3 ಹಾಗೂ ವಿಜಯ್ ಶಂಕರ್ 32/2 ಅವರ ನೆರವಿನಿಂದ 139 ರನ್'ಗಳಿಗೆ ಕಟ್ಟಿಹಾಕಿತ್ತು.

ಆರಂಭಿಕ ಆಟಗಾರರಾದ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್  5 ಓವರ್'ಗಳಲ್ಲಿ ಕೇವಲ 35 ರನ್ ಗಳಿಸಿದರು. ಇವರಿಬ್ಬರನ್ನು ಶಾರ್ದೂಲ್ ಠಾಕೂರ್, ಉನಾದಕ್ಟ್ ಪೆವಿಲಿಯನ್'ಗೆ ಕಳಿಸಿದರು. ವಿಕೇಟ್ ಕೀಪರ್ ಎಂ. ರೆಹಮಾನ್(18) ರನ್ ಗಳಿಸಿ ಶಂಕರ್ ಬೌಲಿಂಗ್'ನಲ್ಲಿ ಔಟಾದರು. 

ಮೊದಲ ಕ್ರಮಾಂಕದ ಆಟಗಾರ ಲಿಟನ್ ದಾಸ್(34) ಹಾಗೂ ಆಲ್'ರೌಂಡರ್ ಶಬ್ಬೀರ್ ರೆಹಮಾನ್(30) ಅವರ ಆಟದಿಂದ 20 ಓವರ್'ಗಳಲ್ಲಿ 138 ರನ್ ಗಳಿಸಿತು. ಭಾರತದ ಪರ ಉನಾದಕ್ಟ್ 38/3, ವಿಜಯ್ ಶಂಕರ್ 32/2 ಹಾಗೂ ಠಾಕೂರ್ ಚಾಹಲ್ ತಲಾ ಒಂದೊಂದು ವಿಕೇಟ್ ಗಳಿಸಿದರು.

ಸ್ಕೋರ್

ಶ್ರೀಲಂಕಾ 20 ಓವರ್'ಗಳಲ್ಲಿ 139/8

(ಲಿಂಟನ್ ದಾಸ್ 34, ಶಬ್ಬೀರ್ ರೆಹಮಾನ್ 30, ಉನಾದಕ್ಟ್ 38/3, ವಿಜಯ್ ಶಂಕರ್ 32/2)

ಭಾರತ 18.4 ಓವರ್'ಗಳಲ್ಲಿ 140/4

(ಶಿಖರ್ ಧವನ್  55, ರೈನಾ 28, ಪಾಂಡೆ  27)

ಫಲಿತಾಂಶ: ಭಾರತಕ್ಕೆ 6 ವಿಕೇಟ್ ಜಯ

ಪಂದ್ಯ ಶ್ರೇಷ್ಠ: ವಿಜಯ್ ಶಂಕರ್

click me!