
ಮುಂಬೈ(ಜು.07): ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಈ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಆದರೆ ಯಾವೆಲ್ಲಾ ಕ್ರೀಡಾಂಗಣದಲ್ಲಿ ಅಫ್ಘಾನ್ ಹಾಗೂ ವೆಸ್ಟ್ ಇಂಡೀಸ್ ಪಂದ್ಯ ಆಡಲಿದೆ ಅನ್ನೋದು ಶೀಘ್ರದಲ್ಲೇ ಹೊರಬೀಳಲಿದೆ. 3 ಟಿ20, 3 ಏಕದಿನ ಹಾಗೂ ಏಕೈಕ ಟೆಸ್ಟ್ ಪಂದ್ಯದ ಸರಣಿ ನವೆಂಬರ್ 5 ರಿಂದ ಆರಂಭಗೊಳ್ಳಲಿದೆ.
ಆಫ್ಘಾನಿಸ್ತಾನ-ವೆಸ್ಟ್ ಇಂಡೀಸ್ ಸರಣಿ
ನವೆಂಬರ್ 5 – 1ನೇ T20
ನವೆಂಬರ್ 7 – 2ನೇ T20
ನವೆಂಬರ್ 9 – 3ನೇ T20
ನವೆಂಬರ್ 13 – 1ನೇ ODI
ನವೆಂಬರ್ 16 – 2ನೇ ODI
ನವೆಂಬರ್ 18 – 3ನೇ ODI
ನವೆಂಬರ್ 27-ಡಿಸೆಂಬರ್ 1 – ಏಕೈಕ ಟೆಸ್ಟ್
ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಸರಣಿಗೂ ಭಾರತ ಆತಿಥ್ಯ ವಹಿಸಿತ್ತು. ಈ ಎರಡು ತಂಡಗಳು ಧರ್ಮಶಾಲಾದಲ್ಲಿ ದ್ವಿಪಕ್ಷೀಯ ಸರಣಿ ಆಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.