ಉತ್ತಮ ಮೊತ್ತ ದಾಖಲಿಸಿದ ವಿಂಡೀಸ್ : ಬುಮ್ರಾಗೆ 4 ವಿಕೇಟ್

By Web DeskFirst Published Oct 27, 2018, 5:48 PM IST
Highlights

ಆರಂಭದಲ್ಲೇ ಬುಮ್ರಾ ದಾಳಿಗೆ 13.1 ಓವರ್ ಗಳಲ್ಲಿ 55/3 ವಿಕೇಟ್ ಕಳೆದುಕೊಂಡ ವಿಂಡೀಸ್  ತಂಡಕ್ಕೆ  ವಿಕೇಟ್ ಕೀಪರ್ ಹೋಪ್  ಹಾಗೂ ಮಧ್ಯಮ ಕ್ರಮಾಂಕದ ಆಟಗಾರ  ಹೇಟ್ಮೆಯಾರ್ 4ನೇ ವಿಕೀಟ್ ನಷ್ಟಕ್ಕೆ 19.3 ಓವರ್ ಗಳಲ್ಲಿ 111 ರನ್ ದಾಖಲಿಸಿದರು.

ಪುಣೆ[ಅ.27]: ವಿಕೇಟ್ ಕೀಪರ್ ಹೋಪ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 284 ರನ್ ಟಾರ್ಗೆಟ್ ನೀಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದ ವಿರಾಟ್ ಕೊಹ್ಲಿ ಪ್ರವಾಸಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು.   

ಆರಂಭದಲ್ಲೇ ಬುಮ್ರಾ ದಾಳಿಗೆ 13.1 ಓವರ್ ಗಳಲ್ಲಿ 55/3 ವಿಕೇಟ್ ಕಳೆದುಕೊಂಡ ವಿಂಡೀಸ್ ತಂಡಕ್ಕೆ ವಿಕೇಟ್ ಕೀಪರ್ ಹೋಪ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಹೇಟ್ಮೆಯಾರ್ 4ನೇ ವಿಕೀಟ್ ನಷ್ಟಕ್ಕೆ 19.3 ಓವರ್ ಗಳಲ್ಲಿ 111 ರನ್ ದಾಖಲಿಸಿದರು. 

ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಹೇಟ್ಮೆಯಾರ್ [37] ಪೆವಿಲಿಯನ್ ಗೆ ತೆರಳಿದ ನಂತರ ಹೋಪ್ ಗೆ ಜೊತೆಯಾದವರು ನಾಯಕ ಜಾಸೆನ್ ಹೋಲ್ಡರ್[32]. 95 ರನ್ ಗಳಿಸಿದ್ದಾಗ ಬುಮ್ರಾ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ 5 ರನ್ ಗಳಿಂದ ಶತಕ ವಂಚಿತರಾದರು. ಕೊನೆಯ 8 ಓವರ್ ಗಳಲ್ಲಿ 9ನೇ ವಿಕೇಟ್ ಜೊತೆಯಾಟಕ್ಕೆ ನರ್ಸ್ [40] ಹಾಗೂ ರೋಚ್ [15] 45 ರನ್ ಗಳಿಸಿ ತಂಡದ ಮೊತ್ತವನ್ನು 283/9 ಪೇರಿಸಲು ಯಶಸ್ವಿಯಾದರು . ಭಾರತದ  ಪರ ಬುಮ್ರಾ  35/4 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್
ವೆಸ್ಟ್ ಇಂಡೀಸ್  50 ಓವರ್ ಗಳಲ್ಲಿ 283/9
[ಹೋಪ್ 95, ಬುಮ್ರಾ 35/4]

ವಿವರ ಅಪೂರ್ಣ     

click me!