ಪ್ರೀತಿ ಜಿಂಟಾ ಕೋಪಕ್ಕೆ ಬಲಿಯಾದ್ರಾ ವಿರೇಂದ್ರ ಸೆಹ್ವಾಗ್?

Published : Nov 04, 2018, 07:35 PM ISTUpdated : Nov 04, 2018, 07:38 PM IST
ಪ್ರೀತಿ ಜಿಂಟಾ ಕೋಪಕ್ಕೆ ಬಲಿಯಾದ್ರಾ ವಿರೇಂದ್ರ ಸೆಹ್ವಾಗ್?

ಸಾರಾಂಶ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆಗಿನ ವಿರೇಂದ್ರ ಸೆಹ್ವಾಗ್ ಒಪ್ಪಂದ ಅಂತ್ಯಗೊಂಡಿದೆ. ದಿಢೀರ್ ಆಗಿ ಫ್ರಾಂಚೈಸಿ ಈ ನಿರ್ಧಾರ ಕೈಗೊಂಡಿದ್ದೇಕೆ? ಇದಕ್ಕೆ ಕಾರಣಗಳೇನು? ಇಲ್ಲಿದೆ.  

ನವದಹೆಲಿ(ನ.04): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಒಪ್ಪಂದವನ್ನ ರದ್ದು ಮಾಡಲಾಗಿದೆ. ಸ್ವತಃ ಸೆಹ್ವಾಗ್ ಟ್ವೀಟ್ ಮೂಲಕ ಈ ವಿಚಾರ ಬಹಿರಂಗ ಪಡಿಸಿದ್ದರು.

 

 

ಸುದೀರ್ಘ 5 ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಜೊತೆ ಗುರುತಿಸಿಕೊಂಡಿದ್ದ ಸೆಹ್ವಾಗ್ ಅವರನ್ನ ನಡೆಸಿಕೊಂಡ ರೀತಿ ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಪಂಜಾಬ್ ತಂಡ ಆಟಗಾರನಾಗಿ ಬಳಿಕ ಮೆಂಟರ್ ಆಗಿ ಜವಾಬ್ದಾರಿ ನಿರ್ವಹಿಸಿದ ಸೆಹ್ವಾಗ್‌ಗೆ ಕೇವಲ ಇ-ಮೇಲ್ ಮೂಲಕ  ಒಪ್ಪಂದ ರದ್ದು ಮಾಡಿರುವ ವಿಚಾರವನ್ನ ತಿಳಿಸಲಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆಗಿನ ಮೆಂಟರ್ ಒಪ್ಪಂದವನ್ನ ರದ್ದು ಮಾಡಿದ್ದೇವೆ ಅನ್ನೋ ಇ-ಮೇಲ್ ಸಂದೇಶವನ್ನ ಸೆಹ್ವಾಗ್‌ಗೆ ರವಾನಿಸಲಾಗಿದೆ. ಆದರೆ ಪ್ರಶ್ನೆ ಇದಲ್ಲ, 5 ವರ್ಷಗಳಿಂದ ತಂಡಕ್ಕಾಗಿ ಸೇವೆ ಸಲ್ಲಿಸಿದ ಸೆಹ್ವಾಗ್‌ ಯಾವುದೇ ಸೂಚನೆ ನೀಡಿದೇ, ಚರ್ಚಿಸದೆ ಇ-ಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ.

ಫ್ರಾಂಚೈಸಿ ಒನರ್, ಬಾಲಿವುಡ್ ನಟಿ ಪ್ರೀತಿ ಜಿಂಟಾಗೆ ಕನಿಷ್ಠ ಸೆಹ್ವಾಗ್ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿ ನಿರ್ಧಾರ ಪ್ರಕಟಿಸಬಹುದಿತ್ತು. ಸೆಹ್ವಾಗ್ ಮೇಲಿನ ಕೋಪದಿಂದ ಪ್ರೀತಿ ಜಿಂಟಾ ಈ ರೀತಿ ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಷ್ಟೇ ಸೆಹ್ವಾಗ್ ಇಲ್ಲದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯಗಳನ್ನ ವೀಕ್ಷಿಸೋದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?