3ನೇ ಟಿ20: ಭಾರತಕ್ಕೆ 182 ರನ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್

By Web DeskFirst Published Nov 11, 2018, 8:32 PM IST
Highlights

ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಹಾಗೂ ವಿಂಡೀಸ್ ನಡುವಿನ 3ನೇ ಟಿ20 ಕುತೂಹಲ ಘಟ್ಟ ತಲುಪಿದೆ. ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೆಸ್ಟ್ ಇಂಡೀಸ್ ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಚೆನ್ನೈ(ನ.11): ಭಾರತ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ3 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ ರನ್ ಟಾರ್ಗೆಟ್ ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಅತ್ಯುತ್ತಮ ಆರಂಭ ಪಡೆಯಿತು. ಶೈ ಹೋಪ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಮೊದಲ ವಿಕೆಟ್‌ಗೆ 51 ರನ್ ಜೊತೆಯಾಟ ನೀಡಿದರು. ಸ್ಫೋಟಕ ಆರಂಭ ನೀಡಿದ ಶೈ ಹೋಪ್ 24 ರನ್ ಸಿಡಿಸಿ ಔಟಾದರು.

ಶಿಮ್ರೊನ್ 26 ರನ್ ಕಾಣಿಕೆ ನೀಡಿದರೆ, ದಿನೇಶ್ ರಾಮ್ದಿನ್ 15 ರನ್ ಸಿಡಿಸಿ ಔಟಾದರು. ಆದರೆ ಡೆರನ್ ಬ್ರಾವೋ ಹಾಗೂ ನಿಕೋಲಾಸ್ ಪೂರನ್ ಅಬ್ಬರಿಸಿದರು. ಪೂರನ್ 25 ಎಸೆತದಲ್ಲಿ 51 ರನ್ ಸಿಡಿಸಿದರು. ಬ್ರಾವೋ 37 ಎಸೆತದಲ್ಲಿ ಅಜೇಯ 43 ರನ್ ಚಚ್ಚಿದರು. ಈ ಮೂಲಕ ವೆಸ್ಟ್ ಇಂಡೀಸ್ 3 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು. 

click me!