ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಓಪನರ್ ಆಗಿಯೂ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸುವುದರೊಂದಿಗೆ ಹಲವಾರು ಅಪರೂಪದ ದಾಖಲೆಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ವೈಜಾಗ್[ಅ.02]: ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೆಡ್ ಬಾಲ್ ಕ್ರಿಕೆಟ್’ನಲ್ಲೂ ತಾವೊಬ್ಬ ಪ್ರತಿಭಾನ್ವಿತ ಆರಂಭಿಕ ಬ್ಯಾಟ್ಸ್ ಮನ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
IND 179/0 after 54 Overs | That's 💯 up for , and 🇮🇳 have only strengthened their grip on the game. into the attack and finding some turn here, and that's generated some excitement among the🇿🇦's, with Rohit being beaten.
— Cricket South Africa (@OfficialCSA)ಹೌದು ಇದುವರೆಗೂ ಟೆಸ್ಟ್ ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿಯುತ್ತಿದ್ದ ರೋಹಿತ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದಾರು. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ರೋಹಿತ್ 154 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ 100 ರನ್ ಪೂರೈಸಿದರು. ಇದರೊಂದಿಗೆ ಆರಂಭಿಕನಾಗಿ ಚೊಚ್ಚಲ ಇನಿಂಗ್ಸ್ ನಲ್ಲೇ ಶತಕ ಬಾರಿಸಿದ ಭಾರತದ ನಾಲ್ಕನೇ ಬ್ಯಾಟ್ಸ್ ಮನ್ ಎನ್ನುವ ಕೀರ್ತಿಗೆ ರೋಹಿತ್ ಭಾಜನರಾಗಿದ್ದಾರೆ. ಈ ಮೊದಲು ಆರಂಭಿಕರಾಗಿ ಶಿಖರ್ ಧವನ್, ಕೆ.ಎಲ್ ರಾಹುಲ್ ಹಾಗೂ ಪೃಥ್ವಿ ಶಾ ತಮ್ಮ ಚೊಚ್ಚಲ ಆರಂಭಿಕ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು.
ಇದು ರೋಹಿತ್ ನಾಲ್ಕನೇ ಟೆಸ್ಟ್ ಶತಕ: ಈ ಮೊದಲು ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ 2 ಹಾಗೂ ಶ್ರೀಲಂಕಾ ವಿರುದ್ಧ ಒಂದು ಟೆಸ್ಟ್ ಶತಕ ಸಿಡಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ ರೋಹಿತ್ ಶರ್ಮಾ ಆರಂಭಿಕನಾಗಿ ಶತಕ ಸಿಡಿಸುವುದರೊಂದಿಗೆ ಟೆಸ್ಟ್ ಏಕದಿನ ಹಾಗೂ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಮೊದಲ ಆರಂಭಿಕ ಬ್ಯಾಟ್ಸ್ ಮನ್ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ.
57 ಓವರ್ ಮುಕ್ತಾಯದ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೇ 190 ರನ್ ಬಾರಿಸಿದೆ. ರೋಹಿತ್ ಶರ್ಮಾ 107 ಹಾಗೂ ಮಯಾಂಕ್ ಅಗರ್ ವಾಲ್ 80 ರನ್ ಬಾರಿಸಿದ್ದಾರೆ.