1983ರ ವಿಶ್ವಕಪ್‌ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್!

First Published Jun 29, 2018, 7:25 PM IST
Highlights

ಭಾರತ 1983 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ. ಆದರೆ ಎರಡು ಗೆಲುವಿನಲ್ಲಿ ಯಾವುದು ಬೆಸ್ಟ್ ಅನ್ನೋ ಚರ್ಚೆ 2011ರಿಂದಲೂ ಇದೆ. ಇದೀಗ ಈ ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ಹಾಗಾದರೆ 2 ವಿಶ್ವಕಪ್ ಗೆಲುವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ವಿವರ.

ಡಬ್ಲಿನ್(ಜೂ.29):  ಭಾರತೀಯ ಕ್ರಿಕೆಟ್‌ನಲ್ಲಿ 1983 ಹಾಗೂ 2011ರ ವಿಶ್ವಕಪ್ ಟೂರ್ನಿಗಳು ಅವಿಸ್ಮರಣೀಯ. ಕಪಿಲ್ ದೇವ್ ನಾಯಕತ್ವದ ಭಾರತ ತಂಡ 1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದರೆ, ಎಂ ಎಸ್ ಧೋನಿ ನಾಯಕತ್ವದ ಟೀಂ ಇಂಡಿಯಾ 2011ರಲ್ಲಿ ವಿಶ್ವಚಾಂಪಿಯನ್ ಆಗಿ ದಾಖಲೆ ಬರೆಯಿತು. ಆದರೆ ಇದರಲ್ಲಿ ಯಾವ ವಿಶ್ವಕಪ್ ಬೆಸ್ಟ್ ಅನ್ನೋ ವಾದ ನಡೆಯುತ್ತಲೇ ಇದೆ.

ಭಾರತ ಗೆದ್ದ ಎರಡು ವಿಶ್ವಕಪ್ ಗೆಲುವುಗಳಲ್ಲಿ ಯಾವುದು ಬೆಸ್ಟ್ ಅನ್ನೋ ವಾದಕ್ಕೆ ತಾರ್ಕಿಕ ಅಂತ್ಯ ಇನ್ನೂ ಸಿಕ್ಕಿಲ್ಲ. ಆದರೆ  1983ರ ವಿಶ್ವಕಪ್ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್ ಎಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರೀ ಹೇಳಿದ್ದಾರೆ. 

1983ರಲ್ಲಿ ನಾವು ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿರಲಿಲ್ಲ. ನಮ್ಮ ಮೇಲೆ ಯಾವುದೇ ಒತ್ತಡವಿರಲಿಲ್ಲ. ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ನಾವು 1983ರ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದ್ದೇವೆ. ಆದರೆ 2011ರ ವಿಶ್ವಕಪ್ ಟೂರ್ನಿಯನ್ನ ಭಾರತ ಆಯೋಜಿಸಿತ್ತು. ಜೊತೆಗೆ ಟೀಂ ಇಂಡಿಯಾ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು. ಎಲ್ಲರ ಬಾಯಲ್ಲೂ ಭಾರತ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಈ ಒತ್ತಡಗಳನ್ನ ನಿಭಾಯಿಸಿ ಭಾರತ ಪ್ರಶಸ್ತಿ ಗೆದ್ದಿದೆ. ಹೀಗಾಗಿ 2011ರ ವಿಶ್ವಕಪ್ ಗೆಲುವು ಬೆಸ್ಟ್ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

click me!