
ಎಡ್ಜ್‌ಬಾಸ್ಟನ್(ಆ.02): ಮೊದಲ ಟೆಸ್ಟ್ ಪಂದ್ಯ ಮೊದಲ ದಿನ ಅಬ್ಬರಿಸಿದ್ದ ಟೀಂ ಇಂಡಿಯಾ ದ್ವಿತೀಯ ಮಕಾಡೆ ಮಲಗಿದೆ. ಇಂಗ್ಲೆಂಡ್ ತಂಡವನ್ನ 287 ರನ್‌ಗೆ ಆಲೌಟ್ ಮಾಡಿ ಭರ್ಜರಿ ಮೇಲುಗೈ ಸಾಧಿಸಿದ್ದ ವಿರಾಟ್ ಕೊಹ್ಲಿ ಸೈನ್ಯ ಬ್ಯಾಟಿಂಗ್‌ನಲ್ಲಿ ಹಳೇ ಚಾಳಿ ಮುಂದುವರಿಸಿದಿದೆ.
ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಡಿಸೆಂಟ್ ಒಪನಿಂಗ್ ನೀಡಿದರು. ಇವರಿಬ್ಬರ ಜೊತೆಯಾಟ 50 ರನ್‌ಗೆ ಅಂತ್ಯವಾಯಿತು. ವಿಜಯ್ 20, ಧವನ್ 26 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಕೆಎಲ್ ರಾಹುಲ್, ಅಜಿಂಕ್ಯ ರಹಾನೆ ಹಾಗೂ ದಿನೇಶ್ ಕಾರ್ತಿಕ್ ಹೋರಾಟ ನೀಡಲೇ ಇಲ್ಲ.
ಸದ್ಯ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿರೋದೇ ಟೀಂ ಇಂಡಿಯಾದ ಸಮಾಧಾನ. ಈ ಪಂದ್ಯದ ಫಲಿತಾಂಶ ಇದೀಗ ಕೊಹ್ಲಿ ಕೈಯಲ್ಲಿದೆ. ನೆಚ್ಚಿಕೊಂಡ ಬ್ಯಾಟ್ಸ್‌ಮನ್‌ಗಳೆಲ್ಲಾ ಕೈಕೊಟ್ಟಿದ್ದಾರೆ. 100 ರನ್‌ಗಳಿಸುವಷ್ಟರಲ್ಲಿ ಭಾರತ 5 ವಿಕೆಟ್ ಕಳೆದುಕೊಂಡಿತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನೀಡೋ ಮೂಲಕ ಅರ್ಧಶತಕ ಸಿಡಿಸಿದ್ದಾರೆ.
ಒಂದೆಡೆ ಕೊಹ್ಲಿ ಹೋರಾಟ ನೀಡುತ್ತಿದ್ದರೆ, ಇತ್ತ ಯಾರಿಂದಲೂ ಉತ್ತಮ ಸಾಥ್ ಸಿಗುತ್ತಿಲ್ಲ. ಹಾರ್ದಿಕ್ ಪಾಂಡ್ಯ 22 ರನ್ ಸಿಡಿಸಿ ಔಟಾದರು. ಇನ್ನು ರವಿಚಂದ್ರನ್ ಅಶ್ವಿನ್ 10 ರನ್‌ಗೆ ಸುಸ್ತಾದರು. ಹೀಗಾಗಿ 7 ವಿಕೆಟ್ ಕಳೆದುಕೊಂಡಿರುವ ಭಾರತವನ್ನ ವಿರಾಟ್ ಕೊಹ್ಲಿಯೇ ಕಾಪಾಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.