ಟಾರ್ಗೆಟ್ ಚೇಸ್ ಮಾಡಲು ಹೋದ ಭಾರತಕ್ಕೆ ಆರಂಭಿಕ ಆಘಾತ

By Web DeskFirst Published Sep 2, 2018, 4:18 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ತಿರುವು ಪಡೆದುಕೊಳ್ಳುತ್ತಿದೆ. ಗೆಲುವಿಗೆ 245 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ಹಲವು ಅಡೆ ತಡೆ ಎದುರಿಸುತ್ತಿದೆ. 4ನೇ ದಿನದ ಅಪ್‌ಡೇಟ್ಸ್ ಇಲ್ಲಿದೆ.

ಸೌತಾಂಪ್ಟನ್(ಸೆ.02): 4ನೇ ಟೆಸ್ಟ್ ಪಂದ್ಯ ಗೆಲುವಿಗೆ 245 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿದೆ. ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಶೂನ್ಯ ಸುತ್ತಿದ್ದಾರೆ. ಈ ಮೂಲಕ ಭಾರತ 4 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದೆ.

8 ವಿಕೆಟ್ ನಷ್ಟಕ್ಕೆ 260 ರನ್‌ಗಳೊಂದಿಗೆ 4ನೇ ದಿನದಾಟ ಮುಂದುವರಿಸಿದೆ ಇಂಗ್ಲೆಂಡ್ ಮೊದಲ ಎಸೆತದಲ್ಲೇ ಸ್ಟುವರ್ಟ್ ಬ್ರಾಡ್ ವಿಕೆಟ್ ಕಳೆದುಕೊಂಡಿತು.  46 ರನ್ ಸಿಡಿಸಿದ ಸ್ಯಾಮ್ ಕುರ್ರನ್ ರನೌಟ್ ಆಗೋ ಮೂಲಕ ಇಂಗ್ಲೆಂಡ್ ರನ್‌ಗಳಿಗೆ 2ನೇ ಇನ್ನಿಂಗ್ಸ್‌ನಲ್ಲಿ 271 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತದ ಗೆಲುವಿಗೆ 245 ರನ್ ಟಾರ್ಗೆಟ್ ನೀಡಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 246 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ 273 ರನ್ ಸಿಡಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 27 ರನ್ ಮುನ್ನಡೆ ಪಡೆದುಕೊಂಡಿತ್ತು.
 

click me!