ಜೋಸ್ ಬಟ್ಲರ್ ಆರ್ಭಟ- ವಿಕೆಟ್ ಕಬಳಿಸಲು ಟೀಂ ಇಂಡಿಯಾ ಪರದಾಟ

By Web DeskFirst Published Sep 8, 2018, 6:34 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದರೆ, ಇದೀಗ  ದ್ವಿತೀಯ ದಿನ ಇಂಗ್ಲೆಂಡ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ.ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

ಓವಲ್(ಸೆ.08): ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ  ಅಬ್ಬರಿಸಿದ ಟೀಂ ಇಂಡಿಯಾ ಇದೀಗ ದ್ವಿತೀಯ ದಿನದಾಟದ ಆರಂಭದಲ್ಲಿ ವಿಕೆಟ್ ಕಬಳಿಸಲು ಹರಸಾಹಸ ಪಡುತ್ತಿದೆ.

7 ವಿಕೆಟ್ ನಷ್ಟಕ್ಕೆ 198 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಇಂಗ್ಲೆಂಡ್  ಆರಂಭದಲ್ಲೇ ಆದಿಲ್ ರಶೀದ್ ವಿಕೆಟ್ ಕಳೆದುಕೊಂಡಿತು. ಆದರೆ ಜೋಸ್ ಬಟ್ಲರ್ ಹಾಗೂ ಸ್ಟುವರ್ಟ್ ಬ್ರಾಡ್ ಜೊತೆಯಾಟಕ್ಕೆ ಟೀಂ ಇಂಡಿಯಾ ಸುಸ್ತಾಯಿತು.

ಅರ್ಧಶತಕ ಸಿಡಿಸಿ ಮುನ್ನಗ್ಗುತ್ತಿರುವ ಜೋಸ್ ಬಟ್ಲರ್ ಟೀಂ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಬಟ್ಲರ್‌ಗೆ ಉತ್ತಮ ಸಾಥ್ ನೀಡಿದ ಸ್ಟುವರ್ಟ್ ಬ್ರಾಡ್ 38 ರನ್ ಸಿಡಿಸಿ ಔಟಾದರು.

ಬಟ್ಲರ್ ಅಬ್ಬರದಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 313 ರನ್ ಸಿಡಿಸಿ ಬ್ಯಾಟಿಂಗ್ ಮುಂದುವರಿಸಿದೆ. ಅಲ್ಪ ಮೊತ್ತಕ್ಕೆ ಆಲೌಟ್ ಮಾಡೋ ಲೆಕ್ಕಾಚಾರದಲ್ಲಿದ್ದ ಭಾರತ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲೂ ಸಂಕಷ್ಟ ಎದುರಿಸುವಂತಾಗಿದೆ.

click me!