
ಲಂಡನ್(ಜು.10): ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದ್ದರು. ರೋಹಿತ್ ಶತಕದಿಂದ ಟೀಂ ಇಂಡಿಯಾ ಆಂಗ್ಲರ ವಿರುದ್ಧದ ಚುಟುಕು ಸರಣಿ ಗೆದ್ದು ಸಂಭ್ರಮಿತ್ತು.
ರೋಹಿತ್ ಶರ್ಮಾ ತಮ್ಮ ಗೆಲುವಿನ ಶತಕವನ್ನ ಇಹಲೋಕ ತ್ಯಜಿಸಿದ ಸುಡಾನ್ ಗೆಳೆಯನಿಗೆ ಅರ್ಪಿಸಿದ್ದಾರೆ. ರೋಹಿತ್ ಗೆಳೆಯ ಬೇರೆ ಯಾರು ಅಲ್ಲ, ಕೀನ್ಯಾದ 45 ವರ್ಷದ ಘೇಂಡಾ ಮೃಗ. ಇತ್ತೀಚೆಗೆ ಈ ಘೇಂಡಾ ಮೃಗ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿತ್ತು. ರೋಹಿತ್ ಟ್ವೀಟ್ ಮೂಲಕ ತಮ್ಮ ಸೆಂಚುರಿಯನ್ನ ಡೇಡಿಕೇಟ್ ಮಾಡಿದ್ದಾರೆ.
ಮಾರ್ಚ್ 20 ರಂದು ಸುಡಾನ್‌ನ ಗಂಡು ಘೇಂಡಾ ಮೃಗ ಸಾವನ್ನಪ್ಪಿತ್ತು. ತಕ್ಷಣವೇ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲಘೇಂಡಾ ಮೃಗ ರಕ್ಷಣೆಗೆ ಆಗ್ರಹಿಸಿದ್ದರು.
ಪೀಟರ್ಸನ್ ಬಳಿಕ ಇದೀಗ ರೋಹಿತ್ ಶರ್ಮಾ ತಮ್ಮ ಸೆಂಚುರಿ ಅರ್ಪಿಸೋ ಮೂಲಕ ಪ್ರಾಣಿಗಳ ರಕ್ಷಣೆಗೆ ನಿಂತಿದ್ದಾರೆ. ರೋಹಿತ್ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.