ಕೊಹ್ಲಿ ಪಡೆಯಿಂದ ಇದೆಂಥಾ ಬ್ಯಾಟಿಂಗ್..ಪಾಕ್ ವಿರುದ್ಧದ ಪಂದ್ಯ ನೆನಪಿಸಿಬಿಟ್ರಲ್ಲಾ!

By Web DeskFirst Published Jul 15, 2018, 4:02 PM IST
Highlights

ಇಂಗ್ಲೆಂಡ್ ವಿರುದ್ಧದ ಎರಡನೇ  ಏಕದಿನದಲ್ಲಿ  ಸೋಲು ಕಂಡಿದ್ದ ಭಾರತ ಮತ್ತೊಂದು ದಾಖಲೆಯನ್ನು ಮಾಡಿದೆ. ಎಂ ಎಸ್ ಧೋನಿ 10 ಸಾವಿರ ರನ್ ಗಳಿಸಿದ ಶ್ರೇಯಕ್ಕೆ ಪಾತ್ರವಾದ ಪಂದ್ಯ ಭಾರತದ ದೃಷ್ಟಿಯಲ್ಲಿ ಮತ್ತೊಂದು ದಾಖಲೆಗೂ ಕಾರಣವಾಯಿತು.

ಬೆಂಗಳೂರು[ಜು.15]  ಇಂಗ್ಲೆಂಡ್ ನೀಡಿದ್ದ 323ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ರನ್ 236ರನ್‌ಗಳಿಗೆ ಆಲೌಟ್ ಆಗಿ ಸೋಲೋಪ್ಪಿಕೊಂಡಿತು.  ಏಕದಿನದಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ಇದೀಗ ದ್ವಿತೀಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿತ್ತು.

ಆದರೆ ಊಹಿಸಲು ಅಸಾಧ್ಯವಾದ ದಾಖೆಯೊಂದಕ್ಕೆ ಭಾರತ ಪಾತ್ರವಾಗಬೇಕಾಯಿತು. ಟಿ-20 ಕ್ರಿಕೆಟ್ ಹವಾ, ಐಪಿಎಲ್ ಜ್ವರ ಬಂದ ಮೇಲೆ ಸಿಕ್ಸರ್ ಬಾರಿಸುವುದು ಬ್ಯಾಟ್ಮಮನ್ ಗಳಿಗೆ ನೀರು ಕುಡಿದಷ್ಟೆ ಸುಲಭವಾಗಿದೆ. ಆದರೆ ಈ ಪಂದ್ಯದಲ್ಲಿ ಭಾರತದ ಕಡೆಯಿಂದ ಒಂದು ಸಿಕ್ಸರ್ ದಾಖಲಾಗಲಿಲ್ಲ.

2011ರ ವಿಶ್ವಕಪ್ ಸೆಮಿಫೈನಲ್ ನಂತರ ಭಾರತ ತಂಡ ಪಂದ್ಯವೊಂದರಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಸಲು ಸಾಧ್ಯವಾಗದೆ ಫೆವಿಲಿಯನ್ ಸೇರಿಕೊಂಡಿತು. ಪಾಕಿಸ್ತಾನದ ವಿರುದ್ಧ 2011ರಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆದ್ದಿತ್ತು ಆದರೆ ಸಿಕ್ಸರ್ ದಾಖಲಾಗಿರಲಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ 30 ಬೌಂಡರಿ ದಾಖಲಿಸಿತ್ತು.ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದ ಭಾರತ ತಂಡದ ಮಧ್ಯಮ ಕ್ರಮಾಂಕ ಎಂದಿನ ಆಟ ತೋರಿಸಲಿಲ್ಲ.  ಭರ್ಜರಿ ಫಾರ್ಮ್‌ನಲ್ಲಿದ್ದ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಕೊಹ್ಲಿ 45 ರನ್ ಸಿಡಿಸಿ ಔಟಾದರೆ, ರೈನಾ 46 ರನ್ ಗಳಿಸಿ ನಿರ್ಗಮಿಸಿದರು. ಇದೀಗ ಭಾರತ ಇಂಗ್ಲೆಂಡ್ ನಡುವಿನ  ಏಕದದಿನ ಸರಣಿ 1-1 ಸಮಬಲವಾಗಿದೆ.

click me!