ಭಾರತ-ಇಂಗ್ಲೆಂಡ್ ದ್ವಿತೀಯ ಟಿ20 ಪಂದ್ಯ-ಯಾವಾಗ? ಎಲ್ಲಿ?

First Published Jul 5, 2018, 7:05 PM IST
Highlights

ಇಂಗ್ಲೆಂಡ್ ವಿರುದ್ಧ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇದೀಗ 2ನೇ ಟಿ20 ಪಂದ್ಯಕ್ಕೆ ರೆಡಿಯಾಗಿದೆ. ದ್ವಿತೀಯ ಟಿ20 ಪಂದ್ಯ ಎಲ್ಲಿ ನಡೆಯಲಿದೆ. ಯಾರು ಮೇಲುಗೈ ಸಾಧಿಸಲಿದ್ದಾರೆ? ಇಲ್ಲಿದೆ ವಿವರ
 

ಕಾರ್ಡಿಫ್(ಜು.03): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಗೆದ್ದಿರುವು ಟೀಂ ಇಂಡಿಯಾ ಇದೀಗ 2ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿದೆ. ನಾಳೆ(ಜು.06) ಕಾರ್ಡಿಫ್‌ನಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಇಂಗ್ಲೆಂಡ್ ಸರಣಿ ಉಳಿಸಿಕೊಳ್ಳಲು ಶತಾಯಗತಾಯ ಹೋರಾಟ ನಡೆಸಲಿದೆ.  ಇಂಗ್ಲೆಂಡ್ ಪ್ರವಾಸದಲ್ಲಿ ಶುಭಾರಂಭ ಮಾಡಿರುವ ಭಾರತ, ಆಂಗ್ಲರಿಗೆ ಮತ್ತೊಂದು ಶಾಕ್ ಕೊಡಲು ರೆಡಿಯಾಗಿದೆ.  ಕುಲದೀಪ್ ಯಾದವ್ ಸ್ಪಿನ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್ ಅಬ್ಬರದಿಂದ ಭಾರತ ಮೊದಲ ಪಂದ್ಯವನ್ನ ಸುಲಭವಾಗಿ ಗೆದ್ದುಕೊಂಡಿದೆ. ಈ ಮೂಲಕ ವಿದೇಶಿ ಪಿಚ್‌ನಲ್ಲೂ ಭಾರತದ ಪರಾಕ್ರಮ ಮುಂದುವರಿದಿದೆ.

ಕುಲದೀಪ್ ಯಾದವ್ ಸ್ಪಿನ್ ಎದುರಿಸಲು ಇಂಗ್ಲೆಂಡ್ ಕಠಿಣ ಅಭ್ಯಾಸ ನಡೆಸಿದೆ. ನೆಟ್ ಪ್ರಾಕ್ಟೀಸ್‌ನಲ್ಲಿ ಸ್ಪಿನ್ ಬೌಲಿಂಗ್‌ಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಹೆಚ್ಚು ಅಭ್ಯಾಸ ಮಾಡಿದ್ದಾರೆ. ಈ ಮೂಲಕ ಸರಣಿ ಉಳಿಸಿಕೊಳ್ಳೋ ಲೆಕ್ಕಾಚರದಲ್ಲಿದೆ.

ಪಂದ್ಯ: 2ನೇ ಟಿ20
ಸ್ಥಳ: ಸೋಫಿಯಾ ಗಾರ್ಡನ್, ಕಾರ್ಡಿಫ್
ದಿನಾಂಕ: ಜುಲೈ 06, 2018
ಸಮಯ: ರಾತ್ರಿ 10 ಗಂಟೆ(ಭಾರತೀಯ ಸಮಯ)
ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಸಿಕ್ಸ್ ಹೆಚ್‌ಡಿ

click me!